ನರೇಗಲ್ಲ: ನರೇಗಲ್ಲ ಪಟ್ಟಣ ಪಂಚಾಯಿತಿಯಲ್ಲಿ ಹಲವು ವರ್ಷಗಳಿಂದ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಮುದಕಪ್ಪ ಹಳ್ಳದಮನಿ ಹಾಗೂ ಜಿಲ್ಲಾಧಿಕಾರಿಗಳ ಆದೇಶದನ್ವಯ ವರ್ಗಾವಣೆಗೊಂಡ ಪೌರ ಕಾರ್ಮಿಕರಾದ ನಾಗಮ್ಮ ಬಳ್ಳಾರಿ, ಲೋಡರ್ ಮಾರುತಿ ಚಲವಾದಿ, ಲೋಡರ್ ಹುದ್ದೆಯಿಂದ ಸ್ಯಾನಿಟರಿ ಸುಪರ್‌ವೈಸರ್ ಆಗಿ ಪದನ್ನೋತಿ ಪಡೆದ ಸಂಜು ಗುಡಿಮನಿ ಇವರನ್ನು ಪ.ಪಂ ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಗೂ ಪ.ಪಂ ಸಿಬ್ಬಂದಿಗಳು ಮತ್ತು ಕರ್ನಾಟಕ ರಾಜ್ಯ ಪೌರನೌಕರರ ಸಂಘದ ನರೇಗಲ್ಲ ಶಾಖೆಯ ವತಿಯಿಂದ ಸನ್ಮಾನಿಸಲಾಯಿತು.



