ಹೈದರಾಬಾದ್:- ಬ್ಯಾಡ್ಮಿಂಟನ್ ಆಡುವಾಗಲೇ 25ರ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಹೈದರಾಬಾದ್‌ನ ನಾಗೋಲೆ ಕ್ರೀಡಾಂಗಣದಲ್ಲಿ ಜರುಗಿದೆ.
ಗುಂಡ್ಲಾ ರಾಕೇಶ್ ಮೃತ ಯುವಕ. ಹೈದರಾಬಾದ್‌ನ ಖಾಸಗಿ ಸಂಸ್ಥೆಯ ಉದ್ಯೋಗಿ ರಾಕೇಶ್, ಖಮ್ಮಮ್ ಜಿಲ್ಲೆಯ ತಲ್ಲಡದ ಮಾಜಿ ಉಪ ಸರಪಂಚ ಗುಂಡ್ಲಾ ವೆಂಕಟೇಶ್ವರಲು ಅವರ ಪುತ್ರ. ಭಾನುವಾರ ಸಂಜೆ ಹೈದರಾಬಾದ್‌ನ ನಾಗೋಲೆ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಆಡುವಾಗ ಹೃದಯಾಘಾತದಿಂದ ಕುಸಿದುಬಿದ್ದು ದುರಂತ ಸಂಭವಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿದೆ.



