ಯಾದಗಿರಿ: ನಾಗೇಂದ್ರ, ರಾಜಣ್ಣ ಆಯ್ತು, ನೆಕ್ಸ್ಟ್ ಸತೀಶ್ ಜಾರಕಿಹೊಳಿ ಮುಗಿಸಲು ಪ್ಲ್ಯಾನ್ ಮಾಡಿದ್ದಾರೆ ಎಂದು ಮಾಜಿ ಸಚಿವ ರಾಜುಗೌಡ ಹೊಸ ಬಾಂಬ್ ಸಿಡಿಸಿದ್ದಾರೆ. ಸುರಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಣ್ಣನ ಬಳಿಕ ಸತೀಶ್ ಜಾರಕಿಹೊಳಿ ಮುಗಿಸಲು ಪ್ಲಾನ್ ಇದೆ.
ನಾಗೇಂದ್ರ, ರಾಜಣ್ಣ ಆಯ್ತು ನೆಕ್ಸ್ಟ್ ಸತೀಶ್ ಜಾರಕಿಹೊಳಿ ಸರದಿ ಎಂದಿದ್ದಾರೆ. ಇನ್ನೂ ನಮ್ಮ ಕಮ್ಯುನಿಟಿಯಲ್ಲಿ ನಾವು ಹುಟ್ಟತ್ತಲೇ ನಾಯಕರು. ನಮ್ಮಲ್ಲಿ ಒಬ್ಬರೇ ನಾಯಕರಾಗಬೇಕು ಅಂತೇನಿಲ್ಲ. ರಾಜಣ್ಣ ಮಂತ್ರಿ ಸ್ಥಾನದಿಂದ ಇಳಿದರು ಅಂದ್ರೆ ನಮ್ಮಲ್ಲೇ ಒಬ್ಬರಿಗೆ ಸಿಗುತ್ತೆ ಅಂತ ಪ್ಲ್ಯಾನ್ ಹಾಕ್ತೀವಿ. ಮಂತ್ರಿ ಸ್ಥಾನ ಕೊಡುವ ಆಸೆಯನ್ನ ಮೇಲಿನವರು ತೋರಿಸಿ ಬಿಡ್ತಾರೆ.
ನಾನ್ ಮಂತ್ರಿ ಆಗ್ತೀನಿ, ಯಾಕ್ ಇದನ್ನ ಮಾಡೋಣ ಅಂತೀವಿ. ನಮ್ಮಲ್ಲಿ ಒಗ್ಗಟ್ಟು ಇಲ್ಲದೇ ಇರೋದಕ್ಕೆ ರಮೇಶ್ ಜಾರಕಿಹೊಳಿ ಮೇಲೂ ಆ ಕೆಲಸ ಆಯ್ತು. ನಾಗೇಂದ್ರನ ಮೇಲೂ ಆಯ್ತು.. ಇವತ್ತು ರಾಜಣ್ಣಂದು ಇದೆ. ನೆಕ್ಸ್ಟ್ ಸತೀಶ್ ಅಣ್ಣಂದೂ ಇದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.