ಗದಗ: ನಿನ್ನೆ ಮಧ್ಯಾಹ್ನ ನರಗುಂದ ಪಟ್ಟಣದಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನು ನರಗುಂದ ಪೊಲೀಸರು ಭೇದಿಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಮಾಂತೇಶ್ ರಂಗಣ್ಣನವರ, ರಾಚನ್ಗೌಡ ಅಲಿಯಾಸ್ ಆನಂದ ಅಯ್ಯನಗೌಡರ ಹಾಗೂ ಚಂದ್ರಶೇಖರ್ ಹಾರೋಗೇರಿ ಎಂಬುವವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತದೆ.
ಕೊಲೆಯಾದ ಬಸವರಾಜ್ ಮಮಟಗೇರಿ ಸಹೋದರನ ಜೊತೆಗೆ ಕಳೆದ ಕೆಲ ದಿನಗಳ ಹಿಂದೆ ಜಗಳವಾಗಿತ್ತು ಎನ್ನಲಾಗಿದೆ. ಅದೇ ದ್ವೇಷ ಬೆಳೆದು ಬಸವರಾಜ್ನ ಕೊಲೆಗೆ ಕಾರಣವಾಗಿರಬಹುದು ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಘಟನೆ ಹಿನ್ನೆಲೆ; ಬುಧವಾರ ಮಧ್ಯಾಹ್ನ ನ್ಯೂ ತಾಜ್ ಹೋಟೆಲ್ ನಲ್ಲಿ ಗೆಳೆಯನ ಜೊತೆಗೆ ಊಟಕ್ಕೆ ಕುಳಿತಿದ್ದ ಬಸವರಾಜ್ ನ ಮೇಲೆ ಮೂವರು ಆರೋಪಿಗಳು ಹೋಟೆಲ್ಗೆ ನುಗ್ಗಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದರು. ಆ ಕುರಿತು ನಿನ್ನೆ ನರಗುಂದ ಪೊಲೀಸ್ ಠಾಣೆಯಲ್ಲಿ ಗು.ನಂ.
160/2025 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.



