ಆಧ್ಯಾತ್ಮಿಕ ಗುರು ಪ್ರೇಮಾನಂದ ಮಹಾರಾಜ್ ಅವರನ್ನು ಹಲವು ಸೆಲೆಬ್ರಿಟಿಗಳು ಅನುಸರಿಸುತ್ತಾರೆ. ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿ, ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ದಂಪತಿ ಸೇರಿದಂತೆ ಹಲವರು ಇವರ ಮಾರ್ಗದರ್ಶನದಲ್ಲಿ ನಡೆಯುತ್ತಾರೆ. ಇದೀಗ ಪ್ರೇಮಾನಂದ ಮಹಾರಾಜಾ ವರಿಗೆ ರಾಜ್ ಕುಂದ್ರಾ ತಮ್ಮ ಮೂತ್ರಪಿಂಡಾ ದಾನ ಮಾಡಲು ಮುಂದೆ ಬಂದಿದ್ದಾರೆ.
ಪ್ರೇಮಾನಂದ ಮಹಾರಾಜ್ ಅವರ ಎರಡೂ ಮೂತ್ರಪಿಂಡಗಳು ವಿಫಲವಾಗಿವೆ. ಕಳೆದ ಹತ್ತು ವರ್ಷಗಳಿಂದ ಡಯಾಲಿಸಿಸ್ನಲ್ಲಿದ್ದು ತಾವು ಸಾವಿಗೆ ಹೆದರುವುದಿಲ್ಲ ಎಂದು ಹೇಳಿದರು. ಇದನ್ನು ಕೇಳಿದ ರಾಜ್, ಕೈಮುಗಿದು ತಮ್ಮ ಆಸೆಯನ್ನು ವ್ಯಕ್ತಪಡಿಸಿದರು. ‘ನೀವು ತುಂಬಾ ಜನಪ್ರಿಯರು. ನೀವು ಎಲ್ಲರಿಗೂ ಸ್ಫೂರ್ತಿ. ನೀವು ತುಂಬಾ ಜನರಿಗೆ ಸಹಾಯ ಮಾಡುತ್ತೀರಿ. ನಿಮ್ಮ ಸಮಸ್ಯೆಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ ಮತ್ತು ನಾನು ನಿಮ್ಮ ಸೇವೆಗೆ ಬಂದರೆ, ನಿಮ್ಮ ಹೆಸರಿನಲ್ಲಿ ನನ್ನ ಒಂದು ಮೂತ್ರಪಿಂಡವನ್ನು ದಾನ ಮಾಡುತ್ತೇನೆ’ ಎಂದು ಹೇಳಿದ್ದಾರೆ.
ರಾಜ್ ಅವರ ಮಾತುಗಳನ್ನು ಕೇಳಿ ಶಿಲ್ಪಾ ಕೂಡ ಆಶ್ಚರ್ಯಚಕಿತರಾದರು. ಆದರೆ ಪ್ರೇಮಾನಂದ ಮಹಾರಾಜ್ ಅವರ ವಿನಂತಿಯನ್ನು ತಿರಸ್ಕರಿಸಿದರು. ‘ನೀವು ಆರೋಗ್ಯವಾಗಿದ್ದರೆ ನನಗೆ ಸಾಕು. ದೇವರು ಕರೆಯುವವರೆಗೂ, ಈ ಮೂತ್ರಪಿಂಡವು ನನಗೆ ಯಾವುದೇ ರೀತಿಯಲ್ಲಿ ಹಾನಿ ಮಾಡಲು ಸಾಧ್ಯವಿಲ್ಲ. ದೇವರು ಕರೆಯುವಾಗ, ಎಲ್ಲರೂ ಹೋಗಬೇಕು. ಆದರೆ ನಾನು ನಿಮ್ಮ ದಯೆಯನ್ನು ಸ್ವೀಕರಿಸುತ್ತೇನೆ’ ಎಂದು ಹೇಳಿದರು.