ಪಂಚೇಂದ್ರಿಯಗಳು ನಮ್ಮ ಹಿಡಿತದಲ್ಲಿ ಇರಬೇಕು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಾವು ನೋಡುವ ದೃಷ್ಟಿಯಂತೆ ಸೃಷ್ಟಿ ಇರುತ್ತದೆ. ನಮ್ಮ ನೋಟವು ಶುದ್ಧವಾಗಿದ್ದರೆ ಇತರರ ಮೇಲೆ ನಮ್ಮ ಭಾವನೆಗಳು ನಿರ್ಮಾಣವಾಗುತ್ತವೆ ಎಂದು ಹಾರನಹಳ್ಳಿಯ ಸುಕ್ಷೇತ್ರ ಕೋಡಿಮಠ ಮಹಾಸಂಸ್ಥಾನದ ಪೂಜ್ಯ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.

Advertisement

ಅವರು ಗದುಗಿನ ಅಕ್ಕನ ಬಳಗದಲ್ಲಿ ಜರುಗಿದ ಫೋಟೋ ಅನಾವರಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಮನಸ್ಸಿಗೆ ಇಡೀ ಪ್ರಪಂಚವನ್ನೇ ಸುತ್ತಿ ಬರುವ ಸಾಮರ್ಥ್ಯ ಇದೆ. ಮನಸ್ಸಿನ ನಿಗ್ರಹಗಳನ್ನು ತಡೆದು ಭಗವಂತನ ಸ್ಮರಣೆ ಮಾಡುವುದರಿಂದ ಮನುಷ್ಯ ಪರಿಪೂರ್ಣನಾಗುವನು. ನಮ್ಮ ಪಂಚೇAದ್ರಿಯಗಳು ನಮ್ಮ ಹಿಡಿತದಲ್ಲಿ ಇರಬೇಕು. ಜೀವನದ ಪ್ರತಿ ಹಂತದಲ್ಲಿ ಪರೋಪಕಾರಿಯಾಗಿ ತ್ಯಾಗ ಭಾವದಿಂದ ಪ್ರೀತಿಯಿಂದ ಬಾಳಿ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂದರು.

ಅಕ್ಕನ ಬಳಗದಲ್ಲಿ ರತ್ನಕ್ಕ ಪಾಟೀಲ ಹಾಗೂ ಅವರ ಸಹೋದರಿಯ ಫೋಟೋ ಅನಾವರಣವನ್ನು ಪೂಜ್ಯರು ನೆರವೇರಿಸಿದರು. ಉಮಾ ರಾಮನಕೊಪ್ಪ ಪ್ರಾರ್ಥಿಸಿದರು, ಅಕ್ಕನ ಬಳಗದ ಅಧ್ಯಕ್ಷೆ ಜಯಶ್ರೀ ಹುಬ್ಬಳ್ಳಿ ಅಧ್ಯಕ್ಷತೆ ವಹಿಸಿದ್ದರು. ಶಾರದಾ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಲಿತಾ ಬಾಳಿಹಳ್ಳಿಮಠ ನಿರೂಪಿಸಿದರು. ಕಾರ್ಯದರ್ಶಿ ಜಯಶ್ರೀ ಪಾಟೀಲ ವಂದಿಸಿದರು. ಭಕ್ತಿ ಸೇವೆಯನ್ನು ಜಯಲಕ್ಷ್ಮೀ ಪಾಟೀಲ ವಹಿಸಿದ್ದರು.

ವೇದಿಕೆಯ ಮೇಲೆ ಟ್ರಸ್ಟ್ ಅಧ್ಯಕ್ಷೆ ಕಸ್ತೂರಿ ಹಿರೇಗೌಡರ, ಖಜಾಂಚಿ ಶಿವಲೀಲಾ ಹಿರೇಮಠ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮೃತ್ಯುಂಜಯ ಸಂಕೇಶ್ವರ, ಉಮೇಶ ಹುಬ್ಬಳ್ಳಿ, ವಿಜಯಕುಮಾರ ಬಾಳಿಹಳ್ಳಿಮಠ, ಶಿವಾನಂದಯ್ಯ ಹಿರೇಮಠ, ಡಾ.ಅನಂತ ಶಿವಪೂರ, ಡಾ. ಶೇಖರ ಸಜ್ಜನರ, ರತ್ನಕ್ಕ ಪಾಟೀಲ ಹಾಗೂ ಕುಟುಂಬದ ಸದಸ್ಯರು, ಅಕ್ಕನ ಬಳಗದ ಸದಸ್ಯರು ಹಾಗೂ ಟ್ರಸ್ಟಿಗಳು ಪಾಲ್ಗೊಂಡಿದ್ದರು.


Spread the love

LEAVE A REPLY

Please enter your comment!
Please enter your name here