ಮೈಸೂರು: ಮೈಲಾರಿ ಹೋಟೆಲ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುವೆ ಅವಿನಾಭಾವ ಸಂಬಂಧ. ನಗರಕ್ಕೆ ಭೇಟಿ ನೀಡಿದಾಗಲೆಲ್ಲ ಅವರು ಈ ಹೋಟೆಲ್ ಗೆ ಹೋಗಿ ತಿಂಡಿ ಸವಿಯುತ್ತಾರೆ. ನಾಡಿನ ಮುಖ್ಯಮಂತ್ರಿಯಾಗಿದ್ದರೂ ಒಬ್ಬ ಜನಸಾಮಾನ್ಯನ ಹಾಗೆ ಅವರು ಮೈಲಾರಿ ಹೋಟೆಲ್‌ಗೆ ಬರುತ್ತಾರೆ.
ಇಂದು ಕೂಡ ಮೈಲಾರಿ ಹೋಟೆಲ್‌ನಲ್ಲಿ ಸಿಎಂ ದೋಸೆ, ಇಡ್ಲಿ ಸವಿದರು. ಸಿದ್ದರಾಮಯ್ಯಗೆ ಸಚಿವ ಕೆ.ವೆಂಕಟೇಶ್, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಐಜಿಪಿ ಬೋರಲಿಂಗಯ್ಯ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಸಾಥ್ ನೀಡಿದರು.
ಸಿಎಂ ಸಿದ್ದರಾಮಯ್ಯ ಅವರಿಗೆ ಮೈಲಾರಿ ಹೋಟೆಲ್‌ನ ದೋಸೆ ಬಹಳ ಅಚ್ಚುಮೆಚ್ಚು. ನಗರಕ್ಕೆ ಭೇಟಿ ಕೊಟ್ಟಾಗ ಸಾಮಾನ್ಯವಾಗಿ ಅವರು ಈ ಹೋಟೆಲ್‌ಗೆ ತೆರಳಿ ದೋಸೆ ಸವಿಯುತ್ತಾರೆ.



