ಬಿಜೆಪಿ ಯಾವತ್ತೂ ಹಿಂದುತ್ವದ ಪರ ಇರುವ ರಾಜಕೀಯ ಪಕ್ಷ: ವಿಜಯೇಂದ್ರ

0
Spread the love

ಬೆಂಗಳೂರು:- ಬಿಜೆಪಿ ಯಾವತ್ತೂ ಹಿಂದುತ್ವದ ಪರ ಇರುವ ರಾಜಕೀಯ ಪಕ್ಷ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.

Advertisement

ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ಯಾವತ್ತೂ ಹಿಂದುತ್ವದ ಪರ ಇರುವ ರಾಜಕೀಯ ಪಕ್ಷ. ಹಿಂದೂಗಳ ಮೇಲೆ ದಬ್ಬಾಳಿಕೆ ಎಲ್ಲಿ ಆಗುತ್ತೋ ಅದರ ವಿರುದ್ಧ ನಾವು ಅಲ್ಲಿರ್ತೇವೆ. ಆದ್ರೆ ರಾಜ್ಯ ಸರ್ಕಾರ ಹಿಂದೂಗಳನ್ನ ಯಾವ ಸ್ಥಿತಿಗೆ ತಳ್ಳಿರಬಹುದು? ಯೋಚಿಸಬೇಕಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ನಮ್ಮ ನಾಯಕರ ಜೊತೆ ಮದ್ದೂರು ಭೇಟಿ ಕೊಡ್ತಿದ್ದೇವೆ. ಅಲ್ಲಿಯ ಪರಿಸ್ಥಿತಿ ಸತ್ಯಾಸತ್ಯತೆ ತಿಳಿದುಕೊಳ್ಳುವ ಕೆಲಸ ಮಾಡ್ತೇವೆ. ರಾಜ್ಯದಲ್ಲಿ ಅಶಾಂತಿ ಸೃಷ್ಟಿ ಮಾಡಲಾಗ್ತಿದೆ, ಇದರ ಹೊಣೆ ಸರ್ಕಾರ ಹೊರಬೇಕು. ಹಿಂದೂಗಳು ನೆಮ್ಮದಿಯಿಂದ ಗಣೇಶ ಹಬ್ಬ ಮಾಡೋಕ್ಕಾಗ್ತಿಲ್ಲ. ಯಾವ ಸ್ಥಿತಿಗೆ ಹಿಂದೂಗಳನ್ನ ಈ ಸರ್ಕಾರ ತಳ್ಳಿರಬಹುದು? ಭದ್ರಾವತಿ ಶಾಸಕರು ಮುಸ್ಲಿಂ ಆಗಿ ಹುಟ್ಟುವ ಮಾತಾಡಿದ್ದಾರೆ. ಮುಂದಿನ ಜನ್ಮದ ಮಾತೇಕೆ? ಸಂಗಮೇಶ್ ಅವರು ಈಗಲೇ ಮತಾಂತರ ಆಗಲಿ, ಇವರ ಹೇಳಿಕೆಗಳು ಹಿಂದೂಗಳಿಗೆ ವಿರೋಧ ಉಂಟು ಮಾಡಲು ಪೂರಕ ವಾತಾವರಣ ನಿರ್ಮಿಸಿದೆ. ಅನೇಕ ವಿಚಾರಗಳಲ್ಲಿ ಸರ್ಕಾರ ಹಿಂದೂ ವಿರೋಧಿ ನಡೆ ಇಡ್ತಿದೆ. ಚಿತ್ರದುರ್ಗದಲ್ಲೂ ಹಲವು ನಿರ್ಬಂಧ ಹಾಕಿದ್ದಾರೆ. ನಾವು ಭಾರತದಲ್ಲಿದೀವಾ? ಪಾಕ್ ನಲ್ಲಿದೀವಾ? ಎಂದು ಪ್ರಶ್ನಿಸಿದರು.

ಹರಿಪ್ರಸಾದ್ ಸೇರಿ ಕಾಂಗ್ರೆಸ್‌ನ ಹಲವರು ಅನಾವಶ್ಯಕ ಮಾತಾಡ್ತಿದ್ದಾರೆ. ಸಂಘದ ಹೆಸರು, ಸಂತೋಷ್ ಅವರ ಹೆಸರು ಬಳಸಿಕೊಂಡು ಮಾತಾಡೋದನ್ನು ನಿಲ್ಲಿಸಲಿ. ಮದ್ದೂರಿನ ಘಟನೆಯಲ್ಲಿ ಸಂಪೂರ್ಣವಾಗಿ ಪೊಲೀಸ್ ಇಲಾಖೆ ವೈಫಲ್ಯ ಇದೆ. ಮೆರವಣಿಗೆ ವೇಳೆ ಮಹಿಳಾ ಪೊಲೀಸರು ಇರಲಿಲ್ಲ, ಎಸ್‌ಪಿ ಇರಲಿಲ್ಲ. ಮಸೀದಿಯಲ್ಲಿ ಕಲ್ಲು ಸಂಗ್ರಹ ಮಾಡಿಟ್ಕೋತಾರೆ ಅಂದ್ರೆ ಇದು ಪೊಲೀಸ್ ವೈಫಲ್ಯ ಎಂದು ಕಿಡಿ ಕಾರಿದರಲ್ಲದೇ ಬಿಜೆಪಿ ಯಾವತ್ತೂ ಹಿಂದುತ್ವದ ಪರ ಇರುವ ರಾಜಕೀಯ ಪಕ್ಷ. ಹಿಂದೂಗಳ ಮೇಲೆ ದಬ್ಬಾಳಿಕೆ ಎಲ್ಲಿ ಆಗುತ್ತೋ ಅದರ ವಿರುದ್ಧ ನಾವು ಅಲ್ಲಿರ್ತೇವೆ ಎಂದರು.


Spread the love

LEAVE A REPLY

Please enter your comment!
Please enter your name here