HomeGadag Newsದಶಕದ ಕನಸು ಸಾಕಾರ: ಶಾಸಕ ಡಾ. ಚಂದ್ರು ಲಮಾಣಿ

ದಶಕದ ಕನಸು ಸಾಕಾರ: ಶಾಸಕ ಡಾ. ಚಂದ್ರು ಲಮಾಣಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಪಶು ಆಸ್ಪತ್ರೆ ನಿರ್ಮಾಣದ ದಶಕದ ಕನಸು ಸಾಕಾರಗೊಂಡಿದೆ. ಗ್ರಾಮದ ಅನೇಕ ಮುಖಂಡರು ಪಶು ಆಸ್ಪತ್ರೆ ಬಗ್ಗೆ ಮನವಿ ಮಾಡಿದ್ದರು, ಸರಕಾರದ ಮಟ್ಟದಲ್ಲಿ ಸತತ ಪ್ರಯತ್ನ ನಡೆಸಿದ್ದರ ಫಲವಾಗಿ ಇಂದು ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಅವರು ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ 2024-25ನೇ ಸಾಲಿನ ಆರ್‌ಐಡಿಎಫ್ ಯೋಜನೆಯಡಿಯಲ್ಲಿ ಪಶು ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದರು.

ಬನ್ನಿಕೊಪ್ಪ ಸೇರಿದಂತೆ ಸುತ್ತಮುತ್ತಲಿನ ಬಹುತೇಕರು ಕೃಷಿ ಅವಲಂಬಿತರಾಗಿದ್ದು, ಮುಂಬರುವ ದಿನಗಳಲ್ಲಿ ಕೃಷಿ ಕಾಯಕದಲ್ಲಿ ನಿರತವಾಗುವ ಜಾನುವಾರುಗಳಿಗೆ ನಿಗದಿತ ಸಮಯದಲ್ಲಿ ಚಿಕಿತ್ಸೆ ಲಭಿಸಲು ಎಲ್ಲ ರೀತಿಯ ಕ್ರಮ ಕೈಕೊಳ್ಳಲಾಗುವುದು. ಜಾನುವಾರುಗಳ ಸುರಕ್ಷತೆಗೂ ಸಹ ಆದ್ಯತೆ ನೀಡುವ ದೃಷ್ಟಿಯಿಂದ ಆಸ್ಪತ್ರೆ ನಿರ್ಮಾಣವಾಗಲಿದೆ. ಗುತ್ತಿಗೆದಾರರು ನಿಯಮಾನುಸಾರ ನಿಗದಿತ ಸಮಯದಲ್ಲಿ ಗುಣಮಟ್ಟದ ಕಾಮಗಾರಿಯನ್ನು ಮಾಡಿ ದೀರ್ಘಕಾಲ ಬಾಳಿಕೆ ಬರುವಂತೆ ಕೆಲಸವನ್ನು ಮಾಡಬೇಕೆಂದು ಹೇಳಿದರು.

ಗ್ರಾ.ಪಂ ಅಧ್ಯಕ್ಷೆ ಶ್ರೀರಕ್ಷಾ ವೇರ್ಣೆಕರ, ಗ್ರಾ.ಪಂ ಸದಸ್ಯ ರಮೇಶ ಕರಾಟೆ, ಜಿ.ಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ, ಬೆಳ್ಳಟ್ಟಿ ಗ್ರಾ.ಪಂ ಸದಸ್ಯರಾದ ತಿಮ್ಮರಡ್ಡಿ ಮರಡ್ಡಿ, ಮೋಹನ ಗುತ್ತೆಮ್ಮನವರ, ಪರಪ್ಪ ಹೊನಗಣ್ಣವರ, ಶಂಕರ ಮರಾಠೆ, ರೇಣುಕಾ ಕಬಾಡರ, ಮಹಾವೀರ ಮಂಟಗಣಿ, ಲಕ್ಷ್ಮಣ ವಗ್ಗರ, ಬಸವರಾಜ ಬಳಿಗಾರ, ಗುಡದೀರಪ್ಪ ಹಂಶಿ, ಶಿವು ಗೌಡನಾಯ್ಕರ, ಪ್ರಸಾದ ಕಲಾಲ, ಸುನಂದಾ ಕರಡಿ, ಮಂಜಪ್ಪ ಕಮತರ, ಕಾಶೀನಾಥ ಗಿಡ್ಡವೀರಪ್ಪನವರ, ವಿರೂಪಾಕ್ಷ ಮಾಗಡಿ, ನಿಂಗಪ್ಪ ವಡ್ಡಟ್ಟಿ, ಶಿವಪ್ಪ ಅಕ್ಕಿ ಮುಂತಾದವರು ಉಪಸ್ಥಿತರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!