ಸದ್ದಿಲ್ಲದೆ ನಿಶ್ಚಿತಾರ್ಥ ಮಾಡ್ಕೊಂಡ್ರಾ ರಶ್ಮಿಕಾ ಮಂದಣ್ಣ-ವಿಜಯ್ ದೇವರೊಂಡ!?

0
Spread the love

ಸದ್ದಿಲ್ಲದೆ ರಶ್ಮಿಕಾ ಮಂದಣ್ಣ-ವಿಜಯ್ ದೇವರೊಂಡ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿಂದೆಯೇ  ನಟ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಮಾತುಗಳು ಬಲವಾಗಿ ಕೇಳಿಬಂದಿತ್ತು.

Advertisement

ಇದೀಗ ನಿಶ್ಚಿತಾರ್ಥ ಮುದ್ರೆ ಹಾಕುವ ಮೂಲಕ ಖಚಿತವಾಗಿದೆ. ಅಕ್ಟೋಬರ್ 3ರಂದು ಈ ಶುಭ ಸಮಾರಂಭ ನಡೆದಿದೆಯಂತೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಆದರೆ, ರಶ್ಮಿಕಾ ಆಗಲಿ ವಿಜಯ್ ಆಗಲಿ ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.

ಕೆಲವು ವರದಿಗಳ ಪ್ರಕಾರ ಮನೆಯವರು ಹಾಗೂ ಆಪ್ತರ ಸಮ್ಮುಖದಲ್ಲಿ ರಶ್ಮಿಕಾ ಎಂಗೇಜ್​ಮೆಂಟ್ ಮಾಡಿಕೊಂಡಿದ್ದಾರಂತೆ. ಈ ವಿಷಯವನ್ನು ಗುಟ್ಟಾಗಿ ಇಡುವ ಕಾರಣದಿಂದಲೇ ಎಲ್ಲಿಯೂ ಫೋಟೋ ಲೀಕ್ ಆಗದಂತೆ ನೋಡಿಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಇನ್ನು ನಿಶ್ಚಿತಾರ್ಥದ ವೇಳೆ ಮದುವೆ ಡೇಟ್ ಕೂಡ ನಿಗದಿ ಆಗಿದೆ ಎನ್ನಲಾಗುತ್ತಿದೆ.

ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಫೆಬ್ರವರಿಯಲ್ಲಿ ವಿವಾಹ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಸೆಲೆಬ್ರಿಟಿ ಮದುವೆ ಆದ್ದರಿಂದ ಅದ್ದೂರಿಯಾಗಿ ಇದನ್ನು ನೆರವೇರಿಸಲು ನಿರ್ಧರಿಸಲಾಗಿದೆ. ಸಾಕಷ್ಟು ಸೆಲೆಬ್ರಿಟಿಗಳು ಈ ವಿವಾಹಕ್ಕೆ ಹಾಜರಿ ಹಾಕುವ ನಿರೀಕ್ಷೆ ಇದೆ.

ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮೊದಲ ಬಾರಿಗೆ ಭೇಟಿ ಆಗಿದ್ದು ‘ಗೀತ ಗೋವಿಂದಂ’ ಸಿನಿಮಾ ಸೆಟ್​ನಲ್ಲಿ. 2018ರಲ್ಲಿ ಈ ಸಿನಿಮಾ ರಿಲೀಸ್ ಆಯಿತು. ಇವರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಸಖತ್ ಇಷ್ಟ ಆಯಿತು. ಈ ಸಿನಿಮಾ ಸೂಪರ್ ಹಿಟ್ ಆಯಿತು. ಅಂದಿನಿಂದ ಇವರ ಬಾಂಡಿಂಗ್ ಸ್ಟ್ರಾಂಗ್ ಆಗುತ್ತಾ ಬರುತ್ತಿದೆ. ಇವರ ಮಧ್ಯೆ ಪ್ರೀತಿ ಮೂಡಿದ್ದು, ಅದಕ್ಕೆ ಈಗ ಹೊಸ ಅರ್ಥ ನೀಡಲಾಗಿದೆ.


Spread the love

LEAVE A REPLY

Please enter your comment!
Please enter your name here