ವಿಜಯಸಾಕ್ಷಿ ಸುದ್ದಿ, ಮುಳಗುಂದ: ಹಿಂಗಾರು ಹಂಗಾಮಿನ ಕಡಲೆ ಹಾಗೂ ಜೋಳ ಬೆಳೆಯ ರಿಯಾಯಿತಿ ದರದ ಬಿತ್ತನೆ ಬೀಜಗಳನ್ನು ಮುಳಗುಂದ ಕೃಷಿ ಕೇಂದ್ರದಲ್ಲಿ ಸಹಾಯಕ ಕೃಷಿ ಅಧಿಕಾರಿ ಎಫ್.ಸಿ. ಗುರಿಕಾರ ವಿತರಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, ರಿಯಾಯಿತಿ ದರದಲ್ಲಿ ದೊರೆಯುವ ಹಿಂಗಾರು ಹಂಗಾಮಿನ ಕಡಲೆ ಹಾಗೂ ಜೋಳದ ಬೀಜಗಳು ಲಭ್ಯವಿದ್ದು, ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಶೇಖರ ನಾಯ್ಕ, ಕಾಶಿಮಸಾಬ ಹಾದಿಮನಿ, ಮಂಜುನಾಥ ಕರಿಗಾರ, ರೈತರಾದ ಕಿರಣ ಕುಲಕರ್ಣಿ, ಮಾಹಾಂತೇಶ ಗುಂಜಳ, ಬಸವರಾಜ ಕರಿಗಾರ, ಮುತ್ತಪ್ಪ ಪಲ್ಲೇದ ಇದ್ದರು.



