HomeGadag Newsಅಂಜುಮನ್ ಕಮಿಟಿಗೆ ಆಯ್ಕೆಯಾದ ಸದಸ್ಯರಿಗೆ ಇಂಕ್ವಿಲಾಬ್ ತಂಡದ ಅಭಿನಂದನೆ

ಅಂಜುಮನ್ ಕಮಿಟಿಗೆ ಆಯ್ಕೆಯಾದ ಸದಸ್ಯರಿಗೆ ಇಂಕ್ವಿಲಾಬ್ ತಂಡದ ಅಭಿನಂದನೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ: ನೀವೆಲ್ಲರೂ ಅಂಜುಮನ್ ಎಂದರೇನು, ಅದರ ಚಿರಾಸ್ತಿಗಳು, ಸರ್ಕಾರದಿಂದ ಯಾವ ಸೌಲಭ್ಯ ಹೇಗೆ ಪಡೆಯಬೇಕೆಂದು ಅರಿತುಕೊಳ್ಳಬೇಕು. ಸಮುದಾಯದ ಬಡ ಜನರ ಕುಂದು-ಕೊರತೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಎಸ್‌ಡಿಪಿಐ ರಾಜ್ಯ ಉಪಾಧ್ಯಕ್ಷ ಅಬ್ದುಲ್ ಹನ್ನಾನ್ ಹೇಳಿದರು.

16 ವರ್ಷದ ನಂತರ ನಡೆದ ಗದಗ-ಬೆಟಗೇರಿ ಅಂಜುಮನ್ ಸಂಸ್ಥೆಯ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ನ್ಯಾಯವಾದಿಗಳಾದ ಮುಕ್ತಾರ್ ಅಹಮ್ಮದ್ ಮೌಲ್ವಿ ಮಾತನಾಡಿ, ಒಗ್ಗಟ್ಟಿನಲ್ಲಿ ಬಲವಿದೆ. ಅದರ ಜೊತೆಗೆ ಸಮುದಾಯದ ಎಲ್ಲ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಎಂದು ಹೇಳಿದರು.

ಅಂಜುಮನ್ ಏ ಇಸ್ಲಾಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಾಕೀರ ಹುಸೇನ್ ಮುಜಾವರ ಮಾತನಾಡಿ, ಆತ್ಮಸಾಕ್ಷಿಯಾಗಿ ನೀವು ನ್ಯಾಯದ ಪರವಾಗಿ ನಿಲ್ಲಿ. ಅಂದಾಗ ಸಮುದಾಯವು ನಿಮ್ಮ ಜೊತೆಗೆ ನಿಲ್ಲುತ್ತದೆ. ಸಮುದಾಯಕ್ಕಾಗಿ ನಿಂತಾಗ ಮಾತ್ರ ಸದೃಢ ಸಮಾಜ ಕಟ್ಟಲು ಸಾಧ್ಯ ಎಂದರು.

ಮೌಲಾನಾ ಶಮಶುದ್ದಿನ್ ಅಣ್ಣಿಗೇರಿ ಮಾತನಾಡಿ, ನಾವು ಈ ಚುನಾವಣೆಯಲ್ಲಿ 11 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಇವರು ಸಮುದಾಯದ ಪಾಲಿಗೆ ಮಿನುಗುತ್ತಿರುವ ನಕ್ಷತ್ರಗಳಿದ್ದಂತೆ. ನಾವು ಯಾವ ಜಮಾತಿನವರಾದರೂ, ಸಮುದಾಯದ ಕೆಲಸ ಬಂದಾಗ ನಾವೆಲ್ಲರೂ ಒಗ್ಗೂಡಿ ನಿಂತಾಗ ಮಾತ್ರ ಸಮುದಾಯದ ಗೆಲವು ಸಾಧ್ಯ ಎಂದು ಹೇಳಿದರು.

ಇಂಕ್ವಿಲಾಬ್ ಗ್ರೂಪ್ ಮುಖಂಡ ಅನ್ವರ್ ಹುಸೇನ್ ಬಾಗೇವಾಡಿ, ಡಾ. ನಿಜಾಮುದ್ದಿನ್ ಅತ್ತಾರ್, ಶಹರ ಘಟಕದ ಅಧ್ಯಕ್ಷ ಬಿಲಾಲ್ ಗೋಕಾವಿ ಮಾತನಾಡಿದರು. ಈ ಸಂದರ್ಭದಲ್ಲಿ ಜಹೀರುದ್ದಿನ್ ಪೀರಜಾದೆ, ಕೆ.ಐ. ಶೇಖ್, ಹಾಜಿಅಲಿ ಕೊಪ್ಪಳ, ಹಿರಿಯರಾದ ಸೋಂಪುರ್, ಹಾಜಿ ಮೌಲಾಸಾಬ ಮಾನ್ವಿ, ಎಚ್.ಕೆ. ಮುಲ್ಲಾ, ಅಲ್ತಾಫ್ ಕೊಪ್ಪಳ, ಹಿದಾಯತ್ ಕಾಗದಗಾರ, ಅನ್ವರ್ ಮುಲ್ಲಾ, ಸೋಹೆಲ್ ನಾರಾಯಣಕೇರಿ, ಮೈನುದ್ದಿನ್ ಬಿಜಾಪುರ್, ಮೆಹಬೂಬ್ ಕದಡಿ, ಇಸ್ಮಾಯಿಲ್ ಅಣ್ಣಿಗೇರಿ ಮುಂತಾದವರು ಇದ್ದರು.

ಶಿಕ್ಷಕ ಎಮ್.ಎ. ಯರಗುಡಿ ನಿರೂಪಿಸಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img