ವಿಜಯಸಾಕ್ಷಿ ಸುದ್ದಿ, ಗದಗ: ನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ಧಿಯ ನಿಮಿತ್ತ ಅ.12ರಂದು ಮಧ್ಯಾಹ್ನ 2.45 ಗಂಟೆಗೆ ನಗರದ ವಿರೇಶ್ವರ ಲೈಬ್ರರಿ ಹತ್ತಿರದಿಂದ ಗಣವೇಷಧಾರಿ ಸ್ವಯಂಸೇವಕರ ಭವ್ಯ ಪಥ ಸಂಚಲನ ಕಾರ್ಯಕ್ರಮ ಜರುಗುವುದು. ಈ ಪಥಸಂಚಲನ ಗದಗ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಸಾಯಂಕಾಲ 5 ಗಂಟೆಗೆ ನಗರದ ಗದಗ-ಬೆಟಗೇರಿ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕ ಸಮಾರಂಭ ಜರುಗುವುದು.
ಈ ಪಥಸಂಚಲನ ಕಾರ್ಯಕ್ರಮದಲ್ಲಿ ಗದಗ ಜಿಲ್ಲೆಯ ಸ್ವಯಂಸೇವಕರು, ಪದಾಧಿಕಾರಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಗದಗ-ಬೆಟಗೇರಿ ನಗರಸಭೆಯ ಸದಸ್ಯ ವಿನಾಯಕ ಮಾನ್ವಿ ಪತ್ರಿಕಾ ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.



