ಹಾವೇರಿ: ತೋಟದಲ್ಲಿದ್ದ ಎರಡು ಬೃಹತ್ ಗಾತ್ರದ ಹೆಬ್ಬಾವುಗಳನ್ನು ಉರಗ ತಜ್ಞ ರಕ್ಷಣೆ ಮಾಡಿದ್ದಾರೆ. ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಕ್ಯಾಸನೂರಿನ ತೋಟದಲ್ಲಿ 14 ಅಡಿ ಹಾಗೂ 9 ಅಡಿ ಉದ್ದದ ಎರಡು ಬೃಹತ್ ಗಾತ್ರದ ಹೆಬ್ಬಾವುಗಳನ್ನು ರಕ್ಷಣೆ ಮಾಡಲಾಗಿದೆ.
ರಮೇಶ ಉರಗ ತಜ್ಞರಾಗಿದ್ದು, 25 ಕೆಜಿ ಹಾಗೂ 15 ಕೆಜಿ ಗಾತ್ರದ ಎರಡು ಹೆಬ್ಬಾವು ರಕ್ಷಣೆ ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ. ವೃತ್ತಿಯಲ್ಲಿ ಪೊಲೀಸ್ ಪೇದೆಯಾಗಿ ಕೆಲಸ ಮಾಡುವ ರಮೇಶ ಪ್ರವೃತ್ತಿಯಲ್ಲಿ ಹಾವು ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಇನ್ನೂ ಪೊಲೀಸ್ ಕಾನ್ಸ್‌ಟೇಬಲ್ ಕೆಲಸಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



