ನವದೆಹಲಿ: ದುರ್ಬಲ ರಾಷ್ಟ್ರದಿಂದ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಭಾರತ ಬೆಳೆದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಖಾಸಗಿ ಸುದ್ದಿವಾಹಿನಿಯ ಜಾಗತಿಕ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಅವರು,
ಭಾರತ ಕಳೆದ 11 ವರ್ಷಗಳಲ್ಲಿ ತನ್ನ ಬಿಕ್ಕಟ್ಟುಗಳನ್ನು ನಿವಾರಿಸಿದೆ, ದುರ್ಬಲ ರಾಷ್ಟ್ರದಿಂದ ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಬೆಳೆದಿದೆ. ಭಾರತದ ಹಣದುಬ್ಬರ ಕೂಡ 2ಕ್ಕಿಂತ ಕಡಿಮೆಯಾಗಿದೆ. ಹಾಗೂ ದೇಶದ ಬೆಳವಣಿಗೆ ಶೇಕಡಾ 7 ಕ್ಕಿಂತ ಹೆಚ್ಚಾಗಿದೆ. ಸಣ್ಣ ವ್ಯವಹಾರಗಳಿಂದ ದೊಡ್ಡ ಕೈಗಾರಿಕೆಗಳವರೆಗೆ, ಭಾರತವು ಸ್ವಾವಲಂಬಿ ಮತ್ತು ಆತ್ಮವಿಶ್ವಾಸವನ್ನು ಹೊಂದಿದೆ.
ಭಯೋತ್ಪಾದಕ ದಾಳಿಯ ನಂತರ, ಭಾರತವು ಸರ್ಜಿಕಲ್ ಸ್ಟ್ರೈಕ್‌ಗಳು, ವಾಯುದಾಳಿಗಳು ಮತ್ತು ಆಪರೇಷನ್ ಸಿಂಧೂರ್‌ನಂತಹ ಕಾರ್ಯಾಚರಣೆಗಳೊಂದಿಗೆ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದ್ದಾರೆ. ಹಿಂದಿನ ಸರ್ಕಾರಗಳು ಬಲವಂತದ ಸುಧಾರಣೆಗಳನ್ನು ಜಾರಿಗೆ ತಂದವು, ಆದರೆ ಇದೀಗ ಅವುಗಳಲ್ಲಿ ಬದಲಾವಣೆಗಳನ್ನು ತರಲಾಗಿದೆ. ಜಾಗತಿಕವಾಗಿ ಭಾರತ ಎಲದರಲ್ಲೂ ಪೈಪೋಟಿಯನ್ನು ನೀಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.



