ಬೆಂಗಳೂರು: ಕರ್ನೂಲು ಜಿಲ್ಲೆಯ ಉಪನಗರ ಚಿನ್ನಟೇಕೂರು ಸಮೀಪದಲ್ಲಿ ಇಂದು ಬೆಳಿಗ್ಗಿನ ಜಾವ 3:30 ರ ಸುಮಾರಿಗೆ ಭಯಂಕರ ಬಸ್ ಅಪಘಾತ ಸಂಭವಿಸಿದೆ.
ಪ್ರಯಾಣಿಕರು ನಿದ್ದೆಯಲ್ಲಿದ್ದಾಗಲೇ ಬಸ್ ಅಪಘಾತ ಸಂಭವಿಸಿ ಕ್ಷಣಮಾತ್ರದಲ್ಲೇ ಹೊತ್ತಿ ಉರಿದಿದೆ. ಇದರಿಂದ ಸುಮಾರು 20 ಮಂದಿ ಸಜೀವ ದಹನವಾಗಿದ್ದಾರೆ, ಮಕ್ಕಳು ವಯಸ್ಕರರು ವೃದ್ಧರು ಸೇರಿ ಸುಮಾರು 41 ಮಂದಿ ಬಸ್ನಲ್ಲಿದ್ದರು. ಇದರಲ್ಲಿ ಬೆಂಗಳೂರಿನ ಇಬ್ಬರು ಸಾಫ್ಟ್‌ವೇರ್ ಎಂಜಿನಿಯರ್ ಕೂಡ ಸಾವನ್ನಪ್ಪಿದ್ದಾರೆ.
ಎಂಜಿನಿಯರ್‌ಗಳಾದ ಅನುಷಾ, ಗನ್ನಮನೇನಿ ಧಾತ್ರಿ (ಜಿ.ಧಾತ್ರಿ) ಮೃತ ದುರ್ದೈವಿಗಳು, ಮಹೇಶ್ವರಂ ಅನುಷಾ ರೆಡ್ಡಿ ಮೂಲತಃ ಯದಾದ್ರಿ ಭುವನಗಿರಿ ಜಿಲ್ಲೆಯ ವಸ್ತಕೊಂಡೂರು ಗ್ರಾಮದವರು. ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದರು.
ದೀಪಾವಳಿ ಹಬ್ಬ ಮುಗಿಸಿ ಬರುತ್ತಿದ್ದ ಅನುಷಾ ಇಂದು ಬೆಳಗ್ಗಿನ ಜಾವ ಸಂಭವಿಸಿದ ದುರಂತದಲ್ಲಿ ಮೃತಪಟ್ಟಿದ್ದಾರೆ. ಗನ್ನಮನೇನಿ ಧಾತ್ರಿ (ಜಿ.ಧಾತ್ರಿ) ಬಾಪಟ್ಲ ಜಿಲ್ಲೆಯವರು. ಮಾವನ ಮನೆಯಿಂದ ಬೆಂಗಳೂರಿಗೆ ವಾಪಸ್ ಬರುತ್ತಿದ್ದ ವೇಳೆ ಸಾವನ್ನಪ್ಪಿದ್ದು, ಬದುಕು ದುರಂತ ಅಂತ್ಯಕಂಡಿದೆ.



