ಬೆಂಗಳೂರು:- ಸಿಎಂ ಸಿದ್ದರಾಮಯ್ಯ ನಂತರ ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಎಂಬ ಹೇಳಿಕೆ ಕೊಟ್ಟಿದ್ದ ಯತೀಂದ್ರ ಅವರಿಗೆ ನೋಟಿಸ್ ಕೊಡಲ್ವಾ ಅಂತಾ ಡಿಸಿಎಂ ಡಿಕೆ ಶಿವಕುಮಾರ್ ಬಣದ ನಾಯಕರು ಪ್ರಶ್ನಿಸಿದ್ದಾರೆ.
ಇದೇ ವಿಚಾರವಾಗಿ ಮಾತನಾಡಿದ ಯತ್ನಾಳ್, ಏನ್ ಹೇಳ್ಬೇಕೋ ಹೇಳಿದೀನಿ. ನಾನು ಹೇಳಿದರಲ್ಲಿ ತಪ್ಪಿಲ್ಲ. ನೋಟಿಸ್ ಬಂದಾಗ ನೋಡೋಣ. 5 ವರ್ಷ ಸಿದ್ದರಾಮಯ್ಯನವರೇ ಸಿಎಂ ಆಗಿರ್ತಾರೆ ಅಂತಾ ಕಡ್ಡಿಮುರಿದಂತೆ ಹೇಳಿದ್ದಾರೆ. ಈ ಮೂಲಕ ಡಿಕೆ ಶಿವಕುಮಾರ್ ಸಿಎಂ ಆಗಬೇಕು ಅಂತಿರೋ ನಾಯಕರಿಗೆ ನೇರವಾಗಿ ಟಾಂಗ್ ಕೊಟ್ಟಿದ್ದಾರೆ.
ಒಟ್ಟಾರೆ ಎಂಎಲ್ಸಿ ಯತೀಂದ್ರ ಹೇಳಿಕೆಯಿಂದ ಕಾಂಗ್ರೆಸ್ ಕೋಟೆಯಲ್ಲಿ ಸದ್ಯ ಉತ್ತರಾಧಿಕಾರಿ ಯುದ್ಧ ತಾರಕಕ್ಕೇರಿದೆ. ಯತೀಂದ್ರ ಹೇಳಿಕೆ ಹೈಕಮಾಂಡ್ ಕಿವಿಗೂ ಬಿದ್ದಿದೆ. ಅಲ್ಲದೇ ಯತೀಂದ್ರಗೆ ನೋಟಿಸ್ ಕೊಡಲ್ವಾ ಅಂತಾ ಡಿಸಿಎಂ ಡಿಕೆ ಶಿವಕುಮಾರ್ ಬಣದ ನಾಯಕರು ಸೇರಿ ಹಲವರು ಪ್ರಶ್ನಿಸಿದ್ದು, ಹೈಕಮಾಂಡ್ ಮುಂದಿನ ನಿರ್ಧಾರದ ಬಗ್ಗೆ ಕಾದು ನೋಡಬೇಕಾಗಿದೆ.



