HomeBengaluru Newsಬೆಂಗಳೂರು ಪೊಲೀಸರ ಬೃಹತ್ ಬೇಟೆ: ₹3 ಕೋಟಿ ಮೌಲ್ಯದ 1949 ಕಳವಾದ ಮೊಬೈಲ್‌ಗಳು ಸೀಜ್!

ಬೆಂಗಳೂರು ಪೊಲೀಸರ ಬೃಹತ್ ಬೇಟೆ: ₹3 ಕೋಟಿ ಮೌಲ್ಯದ 1949 ಕಳವಾದ ಮೊಬೈಲ್‌ಗಳು ಸೀಜ್!

For Dai;y Updates Join Our whatsapp Group

Spread the love

ಬೆಂಗಳೂರು: ನಗರ ಪೊಲೀಸರು ಬೃಹತ್ ಆಪರೇಷನ್ ನಡೆಸಿ ಸುಮಾರು ₹3 ಕೋಟಿ ರೂ. ಮೌಲ್ಯದ ಕಳುವಾದ ಮೊಬೈಲ್‌ಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಒಟ್ಟು 1,949 ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಐಫೋನ್ 17 ಪ್ರೋ ಮ್ಯಾಕ್ಸ್, ಸ್ಯಾಮ್ಸಂಗ್ ಎಸ್24, ಓಪ್ಪೊ, ರೆಡ್‌ಮಿ, ರಿಯಲ್‌ಮಿ ಹಾಗೂ ಒನ್‌ಪ್ಲಸ್‌ ಸೇರಿದಂತೆ ವಿವಿಧ ಬ್ರ್ಯಾಂಡ್‌ಗಳ ಮೊಬೈಲ್‌ಗಳು ಪೊಲೀಸರ ವಶಕ್ಕೆ ಬಂದಿವೆ. ವಶಪಡಿಸಿಕೊಂಡ ಮೊಬೈಲ್‌ಗಳ ಒಟ್ಟು ಮೌಲ್ಯ ಸುಮಾರು ₹3.36 ಕೋಟಿ ರೂ. ಆಗಿದೆ.

ಈ ಮೊಬೈಲ್‌ಗಳನ್ನು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದು, ನಂತರ ಕಳೆದುಕೊಂಡ ಮಾಲೀಕರಿಗೆ ಹಿಂತಿರುಗಿಸಲಾಯಿತು. ಪೊಲೀಸರು ಮದನ್, ಶಾಂತಕುಮಾರ್ ಹಾಗೂ ಮೊಹಮ್ಮದ್ ಯಾಸಿನ್ ಎಂಬ ಖದೀಮರನ್ನು ಬಂಧಿಸಿದ್ದಾರೆ. ಇವರು ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುತ್ತಾ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಮೊಬೈಲ್‌ಗಳನ್ನು ಕಳವು ಮಾಡುತ್ತಿದ್ದರು. ನಂತರ ಕದ್ದ ಮೊಬೈಲ್‌ಗಳನ್ನು ತಮ್ಮ ಸಹಚರರಿಗೆ ಪಾಸ್ ಮಾಡಿ, ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಸುತ್ತಿ ಇಡುತ್ತಿದ್ದರು. ಇದರಿಂದ ಮೊಬೈಲ್‌ಗೆ ನೆಟ್‌ವರ್ಕ್ ಸಿಗದೆ “ಸ್ವಿಚ್ ಆಫ್” ಆಗಿ ತೋರುತ್ತಿತ್ತು. ಹೀಗಾಗಿ ಮಾಲೀಕರು ಕರೆ ಮಾಡಿದರೂ ಮೊಬೈಲ್ ಸಿಗದಂತಾಗುತ್ತಿತ್ತು.

ಕಮಾಂಡ್ ಸೆಂಟರ್ ಅಧಿಕಾರಿ ಹಾಗೂ ಸಿಬ್ಬಂದಿ ಸಿಇಐಆರ್ ಪೋರ್ಟಲ್ ಮುಖಾಂತರ 894 ಮೊಬೈಲ್‌ಗಳನ್ನು ಪತ್ತೆಹಚ್ಚಿದ್ದಾರೆ. ಉಳಿದ ಮೊಬೈಲ್‌ಗಳನ್ನು ವಿವಿಧ ಠಾಣೆಗಳ ಪೊಲೀಸರು ಶೋಧಿಸಿ ವಶಪಡಿಸಿಕೊಂಡಿದ್ದಾರೆ. ಪೊಲೀಸರು ಈ ಕಾರ್ಯಾಚರಣೆ ಮೂಲಕ ಕಳ್ಳರ ಹೆಡೆಮುರಿ ಕಟ್ಟಿದ್ದಾರೆ ಎಂಬುದು ನಗರದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!