ದರ್ಶನ್ ಪುತ್ರ ವಿನೀಶ್ ಗೆ ಬರ್ತ್‌ಡೇ ಸಂಭ್ರಮ: ಭಾವನಾತ್ಮಕ ಫೋಸ್ಟ್‌ ಹಂಚಿಕೊಂಡ ವಿಜಯಲಕ್ಷ್ಮೀ

0
Spread the love

ಕನ್ನಡದ ಸ್ಟಾರ್ ನಟ ದರ್ಶನ್ ತೂಗುದೀಪ ಪುತ್ರ ವಿನೀಶ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಆದರೆ ದರ್ಶನ್‌ ಇಲ್ಲದ ಕೊರಗು ವಿನೀಶ್‌ ಅವರನ್ನು ಕಾಡುತ್ತಿದೆ. ಮಗನ ಹುಟ್ಟುಹಬ್ಬದ ಸಂದರ್ಭದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ತಮ್ಮ ಪುತ್ರ ವಿನೀಶ್‌ಗೆ ಹೃದಯಪೂರ್ವಕವಾಗಿ ವಿಶ್ ಮಾಡಿದ್ದಾರೆ. 

Advertisement

ಮಗನ ಹುಟ್ಟುಹಬ್ಬಕ್ಕೆ ಶುಭ ಕೋರಿರುವ ವಿಜಯಲಕ್ಷ್ಮೀ ದರ್ಶನ್ ಜೊತೆಗಿನ ಫೋಟೋ ಫೋಸ್ಟ್‌ ಮಾಡಿ ಮಗನಿಗೆ ಧೈರ್ಯ ತುಂಬಿದ್ದಾರೆ. ಅಷ್ಟೇ ಅಲ್ಲ, ವಿಜಯಲಕ್ಷ್ಮೀ ಅವರು ತಮ್ಮ ಮಗನಿಗೆ ಕೆಲವು ಕಿವಿಮಾತುಗಳನ್ನು ಹೇಳಿದ್ದಾರೆ. ಅದೇನು ನೋಡಿ.

‘ನೀನು ಕೆಲ ಘಟನೆಗಳು, ಹಾಗೂ ಪರಿಸ್ಥಿತಿಯನ್ನ ಎದುರಿಸಿ ನಿಂತಿರುವುದು ನನಗೆ ಹೆಮ್ಮೆ ತಂದಿದೆ. ನಾನು‌, ನಿಮ್ಮ ಅಪ್ಪ ನಿನ್ನನ್ನು‌ ತುಂಬಾನೇ ಪ್ರೀತಿಸುತ್ತೇವೆ ಎಂಬುದನ್ನ ಮರೆಯಬೇಡ ಮಗನೇ’ ಎಂದಿದ್ದಾರೆ ವಿಜಯಲಕ್ಷ್ಮಿ. ಈ ಮೂಲಕ ವಿನೀಶ್ ಅಪ್ಪ ನಟ ದರ್ಶನ್ ಅವರು ಸದ್ಯ ಜೈಲಿನಲ್ಲಿರುವ ಸಂಗತಿಯನ್ನು ನೆನಪಿಸಿಕೊಂಡು ಮಗನಿಗೆ ಸಮಾಧಾನ ಮಾಡುವ ಯತ್ನ ಮಾಡಿದ್ದಾರೆ ವಿಜಯಲಕ್ಷ್ಮೀ ಎನ್ನಬಹುದು.

ಪ್ರತಿವರ್ಷವೂ ಮಗನ ಹುಟ್ಟುಹಬ್ಬವನ್ನು ದರ್ಶನ್‌ ಹಾಗೂ ವಿಜಯಲಕ್ಷ್ಮೀ ಗ್ರಾಂಡ್‌ ಆಗಿ ಆಚರಿಸುತ್ತಿದ್ದರು. ಆದರೆ ಈ ಭಾರಿ ದರ್ಶನ್‌ ಇಲ್ಲದ ಕಾರಣಕ್ಕೆ ಮಗನ ಹುಟ್ಟುಹಬ್ಬವನ್ನು ಸಿಂಪಲ್‌ ಆಗಿ ಆಚರಿಸಲು ಮುಂದಾಗಿದ್ದಾರೆ ವಿಜಯಲಕ್ಷ್ಮೀ.


Spread the love

LEAVE A REPLY

Please enter your comment!
Please enter your name here