ಚಿಕ್ಕಬಳ್ಳಾಪುರ: ರಸ್ತೆಯಲ್ಲಿ ಕಸ ಸುರಿಸುತ್ತಿದ್ದ ಯುವಕನ ಬೈಕ್‌ನ್ನು ನಗರಸಭೆ ಸಿಬ್ಬಂದಿ ವಶಕ್ಕೆ ಪಡೆದಿರುವ ಘಟನೆ ನಗರದ ಕಂದವಾರದಲ್ಲಿ ಜರುಗಿದೆ.
ಘಟನೆಯ ವೇಳೆ ಯುವಕ ರಸ್ತೆ ಬದಿಯಲ್ಲಿ ಕಸ ಸುರಿಸುತ್ತಿದ್ದುದನ್ನು ಗಮನಿಸಿದ ನಗರಸಭೆ ಸಿಬ್ಬಂದಿ ಅವನನ್ನು ಪ್ರಶ್ನಿಸಿ, ದಂಡ ಕಟ್ಟುವಂತೆ ಸೂಚಿಸಿದ್ದಾರೆ. ಆದರೆ ಯುವಕ ದಂಡ ಕಟ್ಟಲು ನಿರಾಕರಿಸಿ ಸಿಬ್ಬಂದಿಯವರೊಂದಿಗೆ ಗಲಾಟೆ ನಡೆಸಿದ್ದಾನೆ.
“ದಂಡ ಕಟ್ಟಲ್ಲ, ಏನ್ ಮಾಡ್ತೀರೋ ಮಾಡಿ” ಎಂದು ಯುವಕ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ ಹಿನ್ನೆಲೆಯಲ್ಲಿ, ನಗರಸಭೆ ಅಧಿಕಾರಿಗಳು ಆತನ ಬೈಕ್‌ನ್ನು ಸೀಜ್ ಮಾಡಿದ್ದಾರೆ.
ಈ ವೇಳೆ ಬೈಕ್ ಕೀ ತಗುಲಿ ಮಹಿಳಾ ಅಧಿಕಾರಿ ಶಿಲ್ಪಾ ಸುರೇಶ್ ಅವರಿಗೆ ಸಣ್ಣ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.



