HomeGadag Newsಕನಕದಾಸರು ಭಕ್ತಿಯ ಪ್ರತೀಕ: ಪೂಜ್ಯ ಶ್ರೀ ಶಾಂತಲಿಂಗ್ ಮಹಾಸ್ವಾಮಿಗಳು

ಕನಕದಾಸರು ಭಕ್ತಿಯ ಪ್ರತೀಕ: ಪೂಜ್ಯ ಶ್ರೀ ಶಾಂತಲಿಂಗ್ ಮಹಾಸ್ವಾಮಿಗಳು

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ: ಕನಕದಾಸರು ಕೇವಲ ಒಬ್ಬ ಕವಿ ಮತ್ತು ಸಂತ ಮಾತ್ರವಲ್ಲ. ಅವರು ಜಾತ್ಯಾತೀತ ಮತ್ತು ಭಕ್ತಿಯ ಪ್ರತೀಕ ಎಂದು ಭೈರನಹಟ್ಟಿಯ ಪೂಜ್ಯ ಶ್ರೀ ಶಾಂತಲಿಂಗ್ ಮಹಾಸ್ವಾಮಿಗಳು ನುಡಿದರು.

ಲಿಂಗಾಯತ ಪ್ರಗತಿಶೀಲ ಸಂಘದ 2771ನೇ ಶಿವಾನುಭವದ ಸಮ್ಮುಖ ವಹಿಸಿ ಮಾತನಾಡಿದ ಶ್ರೀಗಳು, ಬಯಲು ಆಲಯದೊಳಗೋ, ಆಲಯದೊಳಗೆ ಬಯಲೋ ಎಂದು ಸಾರಿದವರು ಸಂತ ಶ್ರೇಷ್ಠ ಕನಕದಾಸರು. ತೊರೆದು ಜೀವಿಸಬಹುದೇ ಹರಿಯೇ ಎನ್ನುತ್ತಾ ಬದುಕಿದ ಭಕ್ತಿ ಪಂಥದ ಶ್ರೇಷ್ಠ ಸಂತ. ಸಮಾಜದಲ್ಲಿನ ಅನಿಷ್ಟ ಪದ್ಧತಿಯ ವಿರುದ್ಧ ಧ್ವನಿಯೆತ್ತಿದ ದಾರ್ಶನಿಕರು. ಹಾಗೆಯೇ ರಾಜಪೀಠ ತೊರೆದು ದಾಸಪೀಠ ಏರಿದ ಮಹಾನ್ ಸಂತ ಶ್ರೇಷ್ಠರು ಕನಕದಾಸರು ಎಂದು ಹೇಳಿದರು.

ಕನಕಸಿರಿ ಪ್ರಶಸ್ತಿಗೆ ಭಾಜನರಾದ ನಿವೃತ್ತ ಪ್ರಾಚಾರ್ಯ ಡಾ. ಎನ್.ಎಂ. ಅಂಬಲಿಯವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಕುರುಬರ ಸಮಾಜದ ಜಿಲ್ಲಾಧ್ಯಕ್ಷ ಫಕೀರಪ್ಪ ಹೆಬಸೂರ ಉಪಸ್ಥಿತರಿದ್ದರು. ವಚನ ಗಾಯನವನ್ನು ಐಶ್ವರ್ಯ ಹೂಲಿ, ಲಾವಣ್ಯ ಉತ್ತರಕರ, ತಬಲಾವನ್ನು ಕುಮಾರ ಭುವನ, ಕೊಳಲು ವಾದನವನ್ನು ಕುಮಾರ್ ಶ್ರೇಯಸ್ಸು ಮನಮೋಹಕವಾಗಿ ಪ್ರಸ್ತುತಪಡಿಸಿದರು.

ವಚನ ಸಂಗೀತ ಗುರುನಾಥ್ ಸುತಾರ ಹಾಗೂ ಮೃತ್ಯುಂಜಯ ಹಿರೇಮಠ ನಡೆಸಿಕೊಟ್ಟರು. ಧಾರ್ಮಿಕ ಗ್ರಂಥ ಪಠಣವನ್ನು ಸಂಜನಾ ಎಂ.ಹದ್ಲಿ ಹಾಗೂ ವಚನ ಚಿಂತನವನ್ನು ಜೈಬಾ ಎಂ.ನಾಗನೂರು ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ಮುರುಘರಾಜೇಂದ್ರ ಮಹಾಂತಣ್ಣ ಬಡ್ನಿ ಹಾಗೂ ಕುಟುಂಬ ವರ್ಗದವರು ಮತ್ತು ಹುಚ್ಚಣ್ಣ ರೇವಣಪ್ಪ ಶಹಾಪೂರ ವಹಿಸಿದ್ದರು. ನಾಡು-ನುಡಿಯ ಸಾಮೂಹಿಕ ನೃತ್ಯರೂಪಕ ಗುರುಬಸವ ಸಿಬಿಎಸ್‌ಇ ಶಾಲೆಯ ವಿದ್ಯಾರ್ಥಿಗಳಿಂದ ಜರುಗಿತು.

ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ ಹಾಗೂ ವಿದ್ಯಾ ಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹ ಕಾರ್ಯದರ್ಶಿ ಸೋಮನಾಥ ಪುರಾಣಿಕ, ನಾಗರಾಜ್ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಸಹ ಚೇರಮನ್ ಶಿವಾನಂದ ಹೊಂಬಳ ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು.

ಶಿವಾನುಭವ ಸಮಿತಿಯ ಚೇರಮನ್ ಐ.ಬಿ. ಬೆನಕೊಪ್ಪ ಸ್ವಾಗತಿಸಿದರು. ವಿದ್ಯಾ ಗಂಜಿಹಾಳ ಕಾರ್ಯಕ್ರಮ ನಿರೂಪಿಸಿದರು.

ಕೆ.ಎಲ್.ಇ. ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಡಾ. ವೀಣಾ ಈ ಉಪನ್ಯಾಸ ನೀಡಿ, ಕನಕದಾಸರು ಭಕ್ತಿಯ ಸೆಳೆತ ಜಾಸ್ತಿಯಾಗಿ, ಆಧ್ಯಾತ್ಮಿಕವಾಗಿ ತಾರತಮ್ಯವಿಲ್ಲದೆ ಹೇಗೆ ಬದುಕಬೇಕೆನ್ನುವ ತತ್ವವನ್ನು ಕೀರ್ತನೆಗಳು ಸಾರುತ್ತವೆ. ಭಕ್ತನಿಗೆ ದೇವರ ಮೇಲಿನ ಪ್ರೇಮಕ್ಕಿಂತ ಭಕ್ತನ ಮೇಲಿನ ಪ್ರೇಮವೇ ಪ್ರಾಮುಖ್ಯತೆಯಾಗಿದೆ. ಸಂತ ಕನಕದಾಸರು 316 ಕೀರ್ತನೆಗಳನ್ನು ಬರೆದಿದ್ದಾರೆ. ತಾರತಮ್ಯವಿಲ್ಲದ ಸಮಾಜವನ್ನು ಹೇಗೆ ಕಟ್ಟಬೇಕು ಎಂಬುದನ್ನು ಕನಕದಾಸರು ತಿಳಿಸಿದ್ದಾರೆ ಎಂದರು.

 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!