ವಿಜಯಸಾಕ್ಷಿ ಸುದ್ದಿ, ಗದಗ: ಗಿಡ-ಮರಗಳ ಪಾಲನೆ ಮತ್ತು ಪರಿಸರ ಸಂರಕ್ಷಣೆಗೆ ಟೊಂಕಕಟ್ಟಿ ನಿಂತು ಸಾವಿರಾರು ಸಸಿಗಳನ್ನು ನೆಟ್ಟು, ಅನೇಕರಿಗೆ ಪ್ರೇರಣೆ ಮತ್ತು ಸ್ಫೂರ್ತಿಯನ್ನು ತುಂಬಿದ ಸಾಲುಮರದ ತಿಮ್ಮಕ್ಕ ತಮ್ಮ 114ನೇ ವಯಸ್ಸಿನಲ್ಲಿ ನಿಧನರಾದರು. ವೃಕ್ಷಮಾತೆ ಎಂದೇ ಪ್ರಸಿದ್ಧಿ ಪಡೆದ, ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕನ ಜೀವನ ನಮ್ಮಗೆ ಆದರ್ಶ. ಮಕ್ಕಳಿಲ್ಲದ ಕೊರಗನ್ನು ಸಸಿಗಳನ್ನು ನೆಟ್ಟು, ಪಾಲನೆ, ಪೋಷಣೆ ಮಾಡಿ ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದರು. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಗದಗ ಜಿಲ್ಲಾ ರೆಡ್ಡಿ ಮಹಿಳಾ ಬಳಗದ ವತಿಯಿಂದ ನುಡಿನಮನ ಕಾರ್ಯಕ್ರಮವನ್ನು ಹಮ್ಮಿಕೊಂಡು ಅವರಿಗೆ ಶ್ರದ್ದಾಂಜಲಿಯನ್ನು ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಶೈಲಜಾ ಕವಲೂರ, ಸವಿತಾ ಭರಮಗೌಡ್ರ, ಸುಮಾ ಶಿವನಗೌಡರ, ಲತಾ ಮುಂಬಾರಡ್ಡಿ, ಶೋಭಾ ಭೂಮರಡ್ಡಿ, ಕವಿತಾ ಕೊಣ್ಣೂರ, ರಾಜೇಶ್ವರಿ ಶಿರೋಳ, ಆಶಾ ಓದುಗೌಡರ, ವೀಣಾ ತಿರ್ಲಾಪೂರ, ರೂಪಾ ತಿರ್ಲಾಪೂರ, ಸುಧಾ ಹುಚ್ಚಣ್ಣವರ ಹಾಗೂ ಶೋಭಾ ಗದ್ದಿಕೇರಿ ಮುಂತಾದವರು ಉಪಸ್ಥಿತರಿದ್ದರು.



