ನೆಲಮಂಗಲ: ನಿವೃತ್ತ ಡಿವೈಎಸ್‌ಪಿ ಅವರ ಮಗಳಿಗೆ ವರದಕ್ಷಿಣೆ ಕಿರುಕುಳ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ.
ಮದುವೆಯಾದ ಕೇವಲ 15 ದಿನಗಳಲ್ಲೇ ಗಂಡನ ಮನೆತನದಿಂದ ಕಿರುಕುಳ ಆರಂಭವಾಗಿದೆ. ಈ ಹಿನ್ನೆಲೆ ಪತಿ ಗೋವರ್ಧನ್, ತಂದೆ ನಾಗರಾಜು ಹಾಗೂ ಇತರ ಕುಟುಂಬ ಸದಸ್ಯರ ವಿರುದ್ಧ ದೂರು ದಾಖಲಾಗಿದ್ದು, 394/2025 ಪ್ರಕರಣ ಸಂಖ್ಯೆ ಅಡಿಯಲ್ಲಿ ಬಿಎನ್‌ಎಸ್‌ನ 84, 74, 75, 352 ಸೆಕ್ಷನ್‌ಗಳು ಹಾಗೂ ಡಿಪಿ ಆಕ್ಟ್‌ನ 3 ಮತ್ತು 4ನೇ ಕಲಂ ಪ್ರಕಾರ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನೆಲಮಂಗಲ ತಾಲೂಕಿನ ತಿಮ್ಮಪ್ಪನಪಾಳ್ಯದ ನಿವಾಸಿ, ನಿವೃತ್ತ ಡಿವೈಎಸ್‌ಪಿ ಗೋವಿಂದರಾಜು ಅವರ ಮಗಳು ಅನಿತಾ ಮತ್ತು ಡಾ. ಗೋವರ್ಧನ್‌ರ ಮದುವೆ 2023ರಲ್ಲಿ ನೆಲಮಂಗಲ ನಗರದಲ್ಲಿ ಭವ್ಯವಾಗಿ ನಡೆದಿತ್ತು. ಚಿನ್ನ, ಕೆಜಿಗಟ್ಟಲೆ ಬೆಳ್ಳಿ ಹಾಗೂ ಲಕ್ಷಾಂತರ ರೂ. ವೆಚ್ಚ ಮಾಡಿ ಮದುವೆ ಮಾಡಿದರೂ, ಎರಡು ವರ್ಷ ಕೂಡ ಪೂರ್ತಿಯಾಗುವ ಮೊದಲೇ ಗಂಡನ ಮನೆಯವರ ವಿರುದ್ಧ ಕಿರುಕುಳದ ಆರೋಪ ಹೊರಿಸಲಾಗಿದೆ.
ಘಟನೆ ಸಂಬಂಧ ಕೇಸ್ ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.



