ವಿಜಯಸಾಕ್ಷಿ ಸುದ್ದಿ, ಗದಗ: ಕೆ.ಎಸ್.ಸಿ.ಎ. ಆಶ್ರಯದಲ್ಲಿ ನಡೆಯುತ್ತಿರುವ 14 ವರ್ಷ ವಯೋಮಿತಿಯ ಕ್ರಿಕೆಟ್ ಪಂದ್ಯದಲ್ಲಿ ಗದಗ ತಂಡ ಭರ್ಜರಿ ಜಯ ಗಳಿಸಿದೆ.
ಹುಬ್ಬಳ್ಳಿಯ ಟ್ಯಾಲೆಂಟ್ ಸ್ಪೋರ್ಟ್ಸ್ ಕ್ಲಬ್ ತಂಡ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತ್ತು, ಗದಗ ತಂಡ 31 ಓವರ್‌ನಲ್ಲಿ 150 ರನ್ ಗಳಿಸಿತು. ಗದಗ ಪರ ಪೃಥ್ವಿ ಚಪ್ಪರಮನಿ 48, ವೇದಾಂತ 20 ರನ್ ಮಾಡಿದರು. 2ನೇ ಇನ್ನಿಂಗ್ಸ್ ಆರಂಭಿಸಿದ ಹುಬ್ಬಳ್ಳಿ ಟ್ಯಾಲೆಂಟ್ ತಂಡ ಕೇವಲ 10 ರನ್‌ಗೆ ಆಲ್‌ಔಟ್ ಆಯಿತು. ಗದಗ ತಂಡದ ಬೌಲರ್‌ಗಳಾದ ಪ್ರೀತಮ್ ಮುಂಡರಗಿ 5, ರೋಹಿತ್ ಪಾಲ್ 3 ವಿಕೆಟ್ ಪಡೆದು ಮಿಂಚಿದರು.



