ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಕೆಸಿಸಿ ಬ್ಯಾಂಕಿನ ಶಾಖೆಯಲ್ಲಿ ಭಾನುವಾರ ಬ್ಯಾಂಕಿನ 110ನೇ ಸಂಸ್ಥಾಪನಾ ದಿನ ಆಚರಿಸಲಾಯಿತು. ಬ್ಯಾಂಕಿನ ನೋಡಲ್ ಅಧಿಕಾರಿ ಈಶ್ವರ ಮಾದರ ಮಾತನಾಡಿ, ರೈತರ ಹಿತ ಕಾಯಲೆಂದೇ ನಮ್ಮ ಬ್ಯಾಂಕು ಹುಟ್ಟಿಕೊಂಡಿದ್ದು, ಇದು ಈ ಭಾಗದ ರೈತರ ಪಾಲಿಗೆ ಕಲ್ಪವೃಕ್ಷವಾಗಿದೆ. ರೈತರೇ ಬ್ಯಾಂಕಿನ ಬೆನ್ನೆಲುಬು. ಸದಸ್ಯರು ಬ್ಯಾಂಕಿನ ಇಂದ ಪಡೆದ ಸಾಲವನ್ನು ಸಕಾಲಕ್ಕೆ ಪಾವತಿಸಿದರೆ ಬ್ಯಾಂಕು ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದರು.
ಕೆಸಿಸಿ ಬ್ಯಾಂಕಿನ ಲಕ್ಷ್ಮೇಶ್ವರ ಶಾಖೆಯ ವ್ಯವಸ್ಥಾಪಕಿ ಅಮೃತಾ ಎ.ಪಾಟೀಲ, ಟಿಎಪಿಸಿಎಂಎಸ್‌ನ ಅಧ್ಯಕ್ಷ ಸೋಮೇಶ ಉಪನಾಳ, ಬಜಾರ ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಈಶ್ವರ ಭೂತರೆಡ್ಡಿ, ಶಿವಪ್ಪ ಮುಶೆಪ್ಪನವರ, ಈರಯ್ಯ ಚಿಂಚಲಿಮಠ, ಮೌನೇಶ ಶಿರಹಟ್ಟಿ, ನಿಂಗನಗೌಡ ಪಾಟೀಲ, ಪರಮೇಶ ಹರದಗಟ್ಟಿ, ಅಲ್ಪಸಂಖ್ಯಾತರ ಸೊಸೈಟಿಯ ಸಾದಿಕ್ ಮಿರ್ಜಾ, ಪರಮೇಶ ಲಮಾಣಿ, ಚನ್ನಬಸಪ್ಪ ಓಂಕಾರಿ, ಮಲ್ಲಪ್ಪ ಉಮಚಗಿ ಮತ್ತಿತರರು ಇದ್ದರು.



