ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನರೇಗಲ್ಲನ ಬೀಚಿ ಬಳಗಕ್ಕೆ 2025-26ನೇ ಸಾಲಿಗಾಗಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ ಎಂದು ಬಳಗದ ಅಧ್ಯಕ್ಷ ಕೆ.ಎಸ್. ಕಳಕೊಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಧ್ಯಕ್ಷರಾಗಿ ಶಿವಯೋಗಿ ಜಕ್ಕಲಿ, ಸಂಚಾಲಕರಾಗಿ ಜೆ.ಎ. ಪಾಟೀಲ, ಕಾರ್ಯದರ್ಶಿಯಾಗಿ ಭಾರತಿ ಶಿರ್ಸಿ, ಉಪಾಧ್ಯಕ್ಷರಾಗಿ ಮಹಾದೇವಪ್ಪ ಬೇವಿನಕಟ್ಟಿ, ನಿರ್ಮಲಾ ಹಿರೇಮಠ, ಖಜಾಂಚಿಯಾಗಿ ಬಿ.ಬಿ. ಕುರಿ, ಸಹ ಕಾರ್ಯದರ್ಶಿಯಾಗಿ ಸಿ.ಕೆ. ಕೇಸರಿ, ಐ.ಕೆ. ಬೆಟಗೇರಿ, ಪತ್ರಿಕಾ ಪ್ರತಿನಿಧಿಯಾಗಿ ಆದರ್ಶ ಕುಲಕರ್ಣಿ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



