ವಿಜಯಸಾಕ್ಷಿ ಸುದ್ದಿ, ಗದಗ: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮ ವಿಭಾಗ, ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಅಪಸ್ಮಾರ ದಿನ ಆಚರಿಸಲಾಯಿತು.
ಪೊಲೀಸ್ ಸಿಬ್ಬಂದಿಯು ಭೌತಿಕ ಚಟುವಟಿಕೆ ಮತ್ತು ದಿನನಿತ್ಯದ ಕಾರ್ಯವೈಖರಿಯ ಜೊತೆಗೆ ಆರೋಗ್ಯದ ಸಮತೋಲನವನ್ನು ಕಾಪಾಡಿಕೊಳ್ಳಬೇಕು ಮತ್ತು ಕಭಿ ಕಾರ್ಯಕ್ರಮದ ಉಪಯೋಗ ಪಡೆದುಕೊಳ್ಳಬೇಕೆಂದು ಪಿ.ಐ ಸಿದ್ದರಾಮಯ್ಯ ತಿಳಿಸಿದರು.
ಕಭಿ ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಪ್ರವೀಣ ರೋಣದ ಕಭಿ ಕಾರ್ಯಕ್ರಮದ ಉದ್ದೇಶಗಳು ಮತ್ತು ಗುರಿಗಳ ಬಗ್ಗೆ ಜಾಗೃತಿ ಮೂಡಿಸಿ, ಅಪಸ್ಮಾರದ ರೋಗಲಕ್ಷಣಗಳು ಇರುವ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳಲು ಜಿಲ್ಲಾ ಆಸ್ಪತ್ರೆ ರೂ.ನಂ 105ರಲ್ಲಿ ಚಿಕಿತ್ಸೆ ಪಡೆದುಕೊಂಡು ಆರೋಗ್ಯವಾಗಿರಲು ತಿಳಿಸಿದರು.
ಕಭಿ ಕಾರ್ಯಕ್ರಮದ ಫಿಜಿಯೋಥೆರಪಿಸ್ಟ್ ಡಾ. ಅಶ್ವಿನಿ ಎಂ. ಕುರಿಯವರ ಮಾತನಾಡಿ, ಈ ಖಾಯಿಲೆಗೆ ಅನುಗುಣವಾಗಿ ದಿನನಿತ್ಯದ ಚಟುವಟಿಕೆ ಮತ್ತು ವ್ಯಾಯಾಮ ಮಾಡುವುದರ ಜೊತೆಗೆ ಭೌತ ಚಿಕಿತ್ಸೆ ಮತ್ತು ದೈಹಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದರು.
ಕಭಿ ಕಾರ್ಯಕ್ರಮದ ಶುಶ್ರೂಷಕ ರವಿ ನಂದ್ಯಾಳ ಮಾತನಾಡಿ, ಅಪಸ್ಮಾರ ಖಾಯಿಲೆಯ ರೋಗಿಗಳು ಸಿಜರ್ ದಿನನಿತ್ಯದ ದಿನಚರಿಯ ಬಗ್ಗೆ ಬರೆಯುವ ಬಗ್ಗೆ ತಿಳಿಸಿದರು ಮತ್ತು ಈ ರೋಗಲಕ್ಷಣಗಳು ಕಂಡು ಬಂದರೆ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ತಿಳಿಸಿದರು.
ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಪ್ರವೀಣ ಎಸ್. ರೋಣದ ನಿರೂಪಿಸಿದರು. ಡಾ. ಅಶ್ವಿನಿ ಎಂ. ಕುರಿಯವರ ವಂದಿಸಿದರು.



