ಗದಗ:- ನಗರದ ಗಂಜಿಬಸವೇಶ್ವರ ಸರ್ಕಲ್ ಬಳಿ ಕಾರ್ತಿಕ್ ಶಿಲ್ಪಿ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದೆ.
ಮನೆಗೆ ಯಾರೂ ಇಲ್ಲದಿರುವ ಸಮಯದಲ್ಲಿ ಕಳ್ಳನು ಬೆಳಗಿನ ಜಾವ ಸುಮಾರು 3 ಗಂಟೆಗೆ ಮನೆಗೆ ಪ್ರವೇಶಿಸಿ, ಸಿಸಿ ಟಿವಿ ಡ್ಯಾಮೇಜ್ ಮಾಡಿ ಮೆಮೊರಿ ಕಾರ್ಡ್ ಸಹ ಕದ್ದು ಹೋಗಿದ್ದಾನೆ. ಅಲ್ಲದೇ ಮನೆಯಲ್ಲಿರುವ 25 ಗ್ರಾಂ ಚಿನ್ನದ ನೆಕ್ಲೆಸ್, ಉಂಗುರ, ಓಲೆ, 40 ಗ್ರಾಂ ಬೆಳ್ಳಿ ಗಟ್ಟಿ ಹಾಗೂ 15 ಸಾವಿರ ರೂ. ನಗದು ಕಳ್ಳತನ ಆಗಿದ್ದು, ಇದರ ಒಟ್ಟು ಮೌಲ್ಯ ಸುಮಾರು 3.5 ಲಕ್ಷ ರೂ. ಎನ್ನಲಾಗಿದೆ.
ಘಟನೆ ತಿಳಿದು ಸ್ಥಳಕ್ಕೆ ಡಾಗ್ ಸ್ಕಾಡ್ ಮತ್ತು ಫಿಂಗರ್ ಪ್ರಿಂಟ್ ತಂಡ ದೌಡಾಯಿಸಿ ಪರಿಶೀಲಿಸಿದೆ. ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.



