ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೊಬೈಲ್ ಕಳ್ಳರ ಹಾವಳಿ ಹೆಚ್ಚಾಗಿದ್ದು, ಇದೀಗ ಎಚ್ಚೆತ್ತ ಗೋವಿಂದರಾಜನಗರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. . ಪರ್ವೇಜ್,ಜುಬೇರುದ್ದೀನ್, ಸದ್ದಾಂ, ಅಮ್ಜದ್ ಪಾಷಾ ಬಂಧಿತ ಆರೋಪಿಗಳಾಗಿದ್ದು,18 ಲಕ್ಷಮೌಲ್ಯದ 120 ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.
ಬೈಕ್ ನಲ್ಲಿ ಬಂದು ಮೊಬೈಲ್ ಕಿತ್ತುಕೊಂಡು ಪರಾರಿಯಾಗ್ತಿದ್ದರು. ಆರೋಪಿಗಳ ಪೈಕಿ ಪರ್ವೇಜ್ ಹಾಗೂ ಜುಬೇರುದ್ದೀನ್ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದರು. ಸದ್ದಾಂ,ಅಮ್ಜದ್ ಆರೋಪಿಗಳು ಮೊಬೈಲ್ ಖರೀದಿಸುತ್ತಿದ್ರು. ಸ್ನ್ಯಾಚ್ ಮಾಡಿ ಮೊಬೈಲನ್ನ ಮಾರಾಟ ಮಾಡ್ತಿದ್ದರು. ಸದ್ಯ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿರುವ ಪೊಲೀಸರು, ಘಟನೆ ಸಂಬಂಧ ಪ್ರಕರಣ ದಾಖಲಿಸಿದ್ದಾರೆ.



