Home Sports News ರಾಯ್ಪುರದಲ್ಲಿ ಋತುರಾಜ್ ಗಾಯಕ್ವಾಡ್ ಅಬ್ಬರ: ಶತಕ ಸಿಡಿಸಿದ ಯುವ ಬ್ಯಾಟ್ಸ್‌ʼಮನ್

ರಾಯ್ಪುರದಲ್ಲಿ ಋತುರಾಜ್ ಗಾಯಕ್ವಾಡ್ ಅಬ್ಬರ: ಶತಕ ಸಿಡಿಸಿದ ಯುವ ಬ್ಯಾಟ್ಸ್‌ʼಮನ್

0
ರಾಯ್ಪುರದಲ್ಲಿ ಋತುರಾಜ್ ಗಾಯಕ್ವಾಡ್ ಅಬ್ಬರ: ಶತಕ ಸಿಡಿಸಿದ ಯುವ ಬ್ಯಾಟ್ಸ್‌ʼಮನ್
Spread the love

ರಾಯ್‌ಪುರ: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಯುವ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ ಅದ್ಭುತ ಕಂಬ್ಯಾಕ್ ನೀಡಿದ್ದಾರೆ. ಮೊದಲ ಪಂದ್ಯದಲ್ಲಿನ ವೈಫಲ್ಯವನ್ನು ಮರೆಯುವಂತೆ, ಗಾಯಕ್ವಾಡ್ ಈ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದಾರೆ.

77 ಎಸೆತಗಳಲ್ಲಿ ಶತಕ ಪೂರೈಸಿದ ಗಾಯಕ್ವಾಡ್ಡ್, ಒಟ್ಟು 83 ಎಸೆತಗಳಲ್ಲಿ 105 ರನ್ ಗಳಿಸಿದರು. ಅವರ ಸ್ಟ್ರೈಕ್‌ರೇಟ್ 126.51 ಆಗಿದ್ದು, ಎರಡು ಸಿಕ್ಸರ್‌ಗಳು ಹಾಗೂ 12 ಬೌಂಡರಿಗಳೊಂದಿಗೆ ಪ್ರಾಬಲ್ಯ ಸವರುತ್ತ ಬ್ಯಾಟ್ ಬೀಸಿದರು.

ರುತುರಾಜ್ ಅವರ ಶತಕ ವಿಶೇಷ ಏಕೆಂದರೆ, ಅವರು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿದ್ದರೂ, ಈ ಸರಣಿಯಲ್ಲಿ ಅವರಿಗೆ 4 ನೇ ಕ್ರಮಾಂಕದಲ್ಲಿ ಆಡುವ ಅವಕಾಶ ಸಿಕ್ಕಿದೆ. ತಮ್ಮ ಕ್ರಮಾಂಕ ಬದಲಾಯಿಸಿದರೂ ರುತುರಾಜ್ ಕೇವಲ 77 ಎಸೆತಗಳಲ್ಲಿ ಶತಕ ಬಾರಿಸಿದರು.

ಅದ್ಭುತ ವಿಷಯವೆಂದರೆ ಗಾಯಕ್ವಾಡ್ ಸ್ಪಿನ್ನರ್‌ಗಳ ವಿರುದ್ಧ ಮತ್ತು ವೇಗಿಗಳ ವಿರುದ್ಧ ಅಷ್ಟೇ ಉತ್ತಮವಾಗಿ ಬ್ಯಾಟ್ ಬೀಸಿದರು. ಅಂತಿಮವಾಗಿ ರುತುರಾಜ್ ಗಾಯಕ್ವಾಡ್ 83 ಎಸೆತಗಳಲ್ಲಿ 105 ರನ್ ಗಳಿಸಿ ಔಟಾದರು.


Spread the love

LEAVE A REPLY

Please enter your comment!
Please enter your name here