HomeGadag Newsಶಿಕ್ಷಣದ ಪ್ರಗತಿಗೆ ಕಾರಣರಾಗಿ: ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯ್ಕ

ಶಿಕ್ಷಣದ ಪ್ರಗತಿಗೆ ಕಾರಣರಾಗಿ: ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯ್ಕ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಶೈಕ್ಷಣಿಕ ತರಬೇತಿಗಳು ಶಿಕ್ಷಕರ ವೃತ್ತಿ ಜೀವನಕ್ಕೆ ಚೈತನ್ಯ ತುಂಬುತ್ತವೆ. ಸರಕಾರ ಹಾಗೂ ಇಲಾಖೆ ಕೊಡಮಾಡುವ ತರಬೇತಿಗಳನ್ನು ಶಿಕ್ಷಕರು ಸಮರ್ಥವಾಗಿ ತರಗತಿಗಳಲ್ಲಿ ಬಳಸಿಕೊಂಡು ಶಿಕ್ಷಣದ ಪ್ರಗತಿಗೆ ಕಾರಣರಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯ್ಕ ಅಭಿಪ್ರಾಯಪಟ್ಟರು.

ಅವರು ಲಕ್ಷ್ಮೇಶ್ವರದ ಲಿಟಲ್ ಹಾರ್ಟ್ಸ್ ಇಂಟರ್ನ್ಯಾಷನಲ್ ಸ್ಕೂಲ್‌ನಲ್ಲಿ ಶಿಕ್ಷಕರಿಗಾಗಿ ಹಮ್ಮಿಕೊಳ್ಳಲಾದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯ ಗಂಗಾಧರ ಶಿರಹಟ್ಟಿ ಮಾತನಾಡಿ, ಸರ್ಕಾರ ಹಾಗೂ ಖಾಸಗಿ ವಲಯದ ಶಾಲೆಗಳ ಅಂತಿಮ ಗುರಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಯೇ ಆಗಿದ್ದು, ತರಬೇತಿಗಳು ಅದಕ್ಕೆ ಪೂರಕವಾಗಿವೆ ಎಂದರು.

ಈಶ್ವರ ಮೆಡ್ಲೇರಿ, ಬಸವರಾಜ ಯರಗುಪ್ಪಿ, ಡಿ.ಡಿ. ಲಮಾಣಿ, ಗೀತಾ ಹಳ್ಯಾಳ, ಡಿ.ಎಚ್. ಪಾಟೀಲ, ಪಿ.ವಾಯ್. ಮ್ಯಾಗೇರಿ, ಎಫ್.ಎಸ್. ತಳವಾರ, ರಾಘವೇಂದ್ರ ಜೋಶಿ, ಉಮೇಶ್ ನೇಕಾರ, ಜ್ಯೋತಿ ಗಾಯಕವಾಡ, ಎನ್.ಎ. ಮುಲ್ಲಾ, ನವೀನ ಅಂಗಡಿ, ಶ್ರೀನಿವಾಸ ಮತ್ತೂರ ನಿರ್ವಹಿಸಿದರು. ತಾಲೂಕಿನ ವಿವಿಧ ಶಾಲೆಗಳ ಶಿಕ್ಷಕರು ತರಬೇತಿಯಲ್ಲಿ ಪಾಲ್ಗೊಂಡಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!