ವಿಶ್ವ ಚಾಂಪಿಯನ್ ಟೀಂ ಇಂಡಿಯಾ ಶೀಘ್ರದಲ್ಲೇ ಮತ್ತೆ ಮೈದಾನಕ್ಕಿಳಿಯಲು ಸಿದ್ಧವಾಗಿದ್ದು, ಡಿಸೆಂಬರ್ 21ರಿಂದ ಆರಂಭವಾಗುವ ಶ್ರೀಲಂಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಬಿಸಿಸಿಐ ಮಹಿಳಾ ತಂಡವನ್ನು ಪ್ರಕಟಿಸಿದೆ.
ಹರ್ಮನ್‌ಪ್ರೀತ್ ಕೌರ್ ನಾಯಕತ್ವದ 15 ಸದಸ್ಯರ ತಂಡದಲ್ಲಿ ಉಪನಾಯಕಿಯಾಗಿ ಸ್ಮೃತಿ ಮಂಧಾನ ಸ್ಥಾನ ಪಡೆದಿದ್ದಾರೆ. ವಿಶ್ವಕಪ್ ಫೈನಲ್‌ನಲ್ಲಿ ನವೆಂಬರ್ 2ರಂದು ದಕ್ಷಿಣ ಆಫ್ರಿಕಾವನ್ನು ಮಣಿಸಿ ಚಾಂಪಿಯನ್ ಆಗಿದ್ದ ನಂತರ ತಂಡ ವಿಶ್ರಾಂತಿಯಿಂದ ದೂರವಾಗಿದ್ದು, ಈ ಮುಂದಿನ ಸರಣಿ ವಿಶ್ವಕಪ್ ನಂತರದ ಮೊದಲ ಅಂತಾರಾಷ್ಟ್ರೀಯ ಆಕ್ಷನ್ ಆಗಿದೆ.
ವೈಯಕ್ತಿಕ ಬದುಕಿನ ಅಡೆತಡೆಗಳ ನಡುವೆ ಸ್ಮೃತಿ ಮಂಧಾನ ತಮ್ಮ ವೃತ್ತಿಜೀವನಕ್ಕೆ ಆದ್ಯತೆ ನೀಡಿ ತಂಡಕ್ಕೆ ಸೇರಿರುವುದು ಪ್ರಮುಖ ಬೆಳವಣಿಗೆ. ದೀಪ್ತಿ ಶರ್ಮಾ, ಜೆಮಿಮಾ ರೋಡ್ರಿಗ್ಸ್, ಶೆಫಾಲಿ ವರ್ಮಾ ಸೇರಿದಂತೆ ಏಕದಿನ ವಿಶ್ವಕಪ್ ವಿಜೇತ ತಂಡದ ಅನೇಕ ಆಟಗಾರ್ತಿಯರು ಈ ತಂಡದಲ್ಲಿದ್ದಾರೆ.



