• About
  • Advertise
  • Privacy & Policy
  • Contact
Friday, November 13, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Gadag News

ಬರದ ಸಂಕಷ್ಟದಲ್ಲಿರುವ ರೈತರ ಜೊತೆ ದೀಪಾವಳಿ ಆಚರಿಸಿದ ಅನಿಲ ಮೆಣಸಿನಕಾಯಿ; ಪೂಜೆ, ಯಜ್ಞದ ಮೂಲಕ ಮಳೆಗಾಗಿ ಪ್ರಾರ್ಥನೆ

Vijaya Sakshi News Desk by Vijaya Sakshi News Desk
November 13, 2026
in Gadag News
ಬರದ ಸಂಕಷ್ಟದಲ್ಲಿರುವ ರೈತರ ಜೊತೆ ದೀಪಾವಳಿ ಆಚರಿಸಿದ ಅನಿಲ ಮೆಣಸಿನಕಾಯಿ; ಪೂಜೆ, ಯಜ್ಞದ ಮೂಲಕ ಮಳೆಗಾಗಿ ಪ್ರಾರ್ಥನೆ
0
SHARES
4
VIEWS
Share on Facebook

ಗದಗ: ರಾಜ್ಯದಲ್ಲಿ ಮಳೆಯ ಕೊರತೆ, ಬೆಳೆ ನಷ್ಟ ಹಾಗೂ ಕೃಷಿ ಉತ್ಪನ್ನಗಳ ಬೆಲೆ ಕುಸಿತದಿಂದ ರೈತರು ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ, ಪಟಾಕಿ ಸಿಡಿಸಿ ಸಂಭ್ರಮಿಸುವ ಬದಲು ಅನ್ನದಾತರೊಂದಿಗೆ ದೀಪಾವಳಿ ಆಚರಿಸುವ ಮೂಲಕ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಗಮನ ಸೆಳೆದಿದ್ದಾರೆ.

ಗದಗ ತಾಲೂಕಿನ ಹರ್ತಿ ಗ್ರಾಮದ ತೇರಿನ ಬಯಲಿನಲ್ಲಿ ಅನಿಲ್ ಮೆಣಸಿನಕಾಯಿ ನೇತೃತ್ವದಲ್ಲಿ ಆಯೋಜಿಸಿದ್ದ ರೈತರೊಂದಿಗಿನ ದೀಪಾವಳಿ ಸಂಭ್ರಮದಲ್ಲಿ ಸಾವಿರಾರು ರೈತರು ಭಾಗವಹಿಸಿದ್ದರು. ರೈತರ ಬದುಕಿನಲ್ಲಿ ಮತ್ತೆ ಬೆಳಕು ಮೂಡಲಿ, ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆಗಳಿಗೆ ಮರುಜೀವ ಬರಲಿ ಎಂಬ ಆಶಯದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಗ್ರಾಮದೇವತೆ ದ್ಯಾಮವ್ವ ದೇವಿ ದೇವಸ್ಥಾನದಿಂದ ತೇರಿನ ಬಯಲಿನವರೆಗೆ ರೈತ ಮಹಿಳೆಯರ ಬೃಹತ್ ಪೂರ್ಣಕುಂಭ ಮೆರವಣಿಗೆ ನಡೆಯಿತು. ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನ ಮೆರವಣಿಗೆಗೆ ಮೆರುಗು ನೀಡಿತು. ಹಸಿರು ಶಾಲು ಧರಿಸಿ ಆಗಮಿಸಿದ ರೈತರು ಸಾಮೂಹಿಕ ದೀಪಾವಳಿ ಸಂಭ್ರಮದಲ್ಲಿ ಪಾಲ್ಗೊಂಡರು. ಹರ್ತಿ ಸೇರಿದಂತೆ ಕುರ್ತಕೋಟಿ, ಅಂತೂರ ಬೆಂತೂರ, ಮುಳಗುಂದ, ಚಿಂಚಲಿ, ಕಣವಿ, ಹೊಸೂರು ಸೇರಿದಂತೆ ಹತ್ತಾರು ಗ್ರಾಮಗಳ ಸಾವಿರಾರು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಾಜಿ ಸಚಿವ ಶ್ರೀರಾಮುಲು, ಶಾಸಕ ಕಳಕಪ್ಪ ಬಂಡಿ ಸೇರಿದಂತೆ ಹಲವು ಬಿಜೆಪಿ ನಾಯಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಧಾರ್ಮಿಕ ವಿಧಿವಿಧಾನಗಳಿಗೂ ಆದ್ಯತೆ ನೀಡಲಾಗಿತ್ತು. ಕೊಲ್ಲಾಪುರದಿಂದ ತರಿಸಲಾದ ಮಹಾಲಕ್ಷ್ಮಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಉತ್ತಮ ಮಳೆಗಾಗಿ ಇಂದ್ರದೇವನ ಯಜ್ಞ ಹಾಗೂ ಹೋಮ-ಹವನಗಳನ್ನು ನೆರವೇರಿಸಿ ಪ್ರಾರ್ಥಿಸಲಾಯಿತು. ಹಾಲುಮತ ಸಮಾಜದ ಸಂಪ್ರದಾಯದಂತೆ ಹಟ್ಟಿ ಪೂಜೆ, ಗೋಪೂಜೆ ನಡೆಸಲಾಯಿತು. ಎತ್ತು, ಹಸುಗಳು ಹಾಗೂ ಕೃಷಿ ಸಲಕರಣೆಗಳಿಗೂ ಪೂಜೆ ಸಲ್ಲಿಸಲಾಯಿತು.

ಇದೇ ವೇಳೆ ರೈತ ಮಹಿಳೆಯರಿಗೆ ಉಡಿ ತುಂಬಿ ಗೌರವಿಸಲಾಯಿತು. ರೈತರಿಗೆ ಮಡಿ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದವರಿಗೆ ಮೂರು ಹೊತ್ತು ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಬರದ ಸಂಕಷ್ಟದಿಂದ ಕಂಗೆಟ್ಟಿರುವ ರೈತರಿಗೆ ಧೈರ್ಯ ತುಂಬಿ, ಅವರೊಂದಿಗೆ ಹಬ್ಬದ ಸಂಭ್ರಮ ಹಂಚಿಕೊಳ್ಳುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.

ಒಟ್ಟಿನಲ್ಲಿ ಹರ್ತಿಯಲ್ಲಿ ನಡೆದ ದೀಪಾವಳಿ ಸಂಭ್ರಮ ಪಟಾಕಿಗಳ ಅಬ್ಬರಕ್ಕಿಂತ ರೈತರ ಬದುಕಿನ ನೋವು, ನಿರೀಕ್ಷೆ ಹಾಗೂ ಸಮೃದ್ಧಿಯ ಆಶಯಕ್ಕೆ ಸಾಕ್ಷಿಯಾಯಿತು. ಮುಂದಿನ ದೀಪಾವಳಿಯ ವೇಳೆಗೆ ಬರದ ಕತ್ತಲು ದೂರವಾಗಿ, ಹೊಲಗಳಲ್ಲಿ ಹಸಿರು ತುಂಬಿ ರೈತರ ಬದುಕಿನಲ್ಲಿ ಸಮೃದ್ಧಿ ನೆಲೆಸಲಿ ಎಂಬ ಆಶಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.

ರೈತರೊಂದಿಗೆ ದೀಪಾವಳಿ ಆಚರಿಸುವುದೇ ನಮ್ಮ ಆಶಯ: ಅನಿಲ್ ಮೆಣಸಿನಕಾಯಿ

ರೈತ ದೇಶದ ಬೆನ್ನೆಲುಬು. ಮಳೆಯ ಕೊರತೆ ಹಾಗೂ ಬೆಳೆ ನಷ್ಟದಿಂದ ಅನ್ನದಾತರು ಸಂಕಷ್ಟದಲ್ಲಿರುವಾಗ ಅವರೊಂದಿಗೆ ದೀಪಾವಳಿ ಆಚರಿಸುವುದು ನಮ್ಮ ಆಶಯ. ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆಗಳಿಗೆ ಮರುಜೀವ ಬರಲಿ, ರೈತರ ಬದುಕಿನಲ್ಲಿ ಸಮೃದ್ಧಿ ನೆಲೆಸಲಿ ಎಂಬ ಸಂಕಲ್ಪದಿಂದ ಈ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದು ಕಾರ್ಯಕ್ರಮದ ಆಯೋಜಕ ಅನಿಲ್ ಮೆಣಸಿನಕಾಯಿ ತಿಳಿಸಿದರು.

ರೈತರಿಗಾಗಿ ನಡೆದ ಪೂಜೆ, ಯಜ್ಞ ಸಂತಸ ತಂದಿದೆ: ಜಿನ್ನಪ್ಪ, ರೈತ

ಸಂಕಷ್ಟದಲ್ಲಿರುವ ರೈತರೊಂದಿಗೆ ದೀಪಾವಳಿ ಆಚರಿಸಿ, ನಮ್ಮನ್ನು ಗೌರವಿಸಿರುವುದು ಸಂತಸ ತಂದಿದೆ. ರೈತರ ಒಳಿತಿಗಾಗಿ ಪೂಜೆ, ಯಜ್ಞ ಹಾಗೂ ಹೋಮ ನಡೆಸಿರುವುದು ಒಳ್ಳೆಯ ಬೆಳವಣಿಗೆ. ದೇವರ ಕೃಪೆಯಿಂದ ಉತ್ತಮ ಮಳೆಯಾಗಿ ಹೊಲಗಳಲ್ಲಿ ಹಸಿರು ತುಂಬಿ, ರೈತರ ಬದುಕು ಹಸನಾಗಲಿ ಎಂಬುದು ನಮ್ಮ ಆಶಯ ಎಂದು ರೈತ ಜಿನ್ನಪ್ಪ ಹೇಳಿದರು.

ಇಂತಹ ಕಾರ್ಯಕ್ರಮಗಳಿಂದ ರೈತರಿಗೆ ಧೈರ್ಯ

ರೈತರ ಕಷ್ಟದ ಸಮಯದಲ್ಲಿ ನಮ್ಮೊಂದಿಗೆ ಹಬ್ಬದ ಸಂಭ್ರಮ ಹಂಚಿಕೊಂಡಿರುವುದು ಸಂತಸ ತಂದಿದೆ. ಇಂತಹ ಕಾರ್ಯಕ್ರಮಗಳಿಂದ ರೈತರಿಗೆ ಧೈರ್ಯ ಸಿಗುತ್ತದೆ. ಉತ್ತಮ ಮಳೆಯಾಗಿ ಬೆಳೆ ಸಮೃದ್ಧಿಯಾಗಿ, ಅನ್ನದಾತರ ಬದುಕಿನಲ್ಲಿ ನೆಮ್ಮದಿ ನೆಲೆಸಲಿ ಎಂದು ಮತ್ತೊಬ್ಬ ರೈತ ಆಶಯ ವ್ಯಕ್ತಪಡಿಸಿದರು.

Tags: Anil MensinkaiDiwali CelebrationFarmers Diwaligadag newsHarthi VillagekannadanewsKarnatakaVijayasakshivijayasakshinews
ShareSendShare
Previous Post

ಜಾಗತಿಕ ಮಟ್ಟದಲ್ಲಿ ಮಿಂಚಿದ ಗದಗದ ಪ್ರತಿಭೆ; ACCA ಪರೀಕ್ಷೆಯಲ್ಲಿ ಪೂಜಾ ದಾನಿ ಸಾಧನೆ

Next Post

ಬೆಂಗಳೂರಿಗರೇ ಗಮನಿಸಿ! ನಾಳೆಯಿಂದ ಪಿಂಕ್ ಲೈನ್ ಮೆಟ್ರೋ ಆರಂಭ; ಮೊದಲ ರೈಲು, ಕೊನೆಯ ರೈಲು ಸಮಯ ಇಲ್ಲಿದೆ

Vijaya Sakshi News Desk

Vijaya Sakshi News Desk

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Next Post
ಬೆಂಗಳೂರಿಗರೇ ಗಮನಿಸಿ! ನಾಳೆಯಿಂದ ಪಿಂಕ್ ಲೈನ್ ಮೆಟ್ರೋ ಆರಂಭ; ಮೊದಲ ರೈಲು, ಕೊನೆಯ ರೈಲು ಸಮಯ ಇಲ್ಲಿದೆ

ಬೆಂಗಳೂರಿಗರೇ ಗಮನಿಸಿ! ನಾಳೆಯಿಂದ ಪಿಂಕ್ ಲೈನ್ ಮೆಟ್ರೋ ಆರಂಭ; ಮೊದಲ ರೈಲು, ಕೊನೆಯ ರೈಲು ಸಮಯ ಇಲ್ಲಿದೆ

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

November 4, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ಬೆಂಗಳೂರಿಗರೇ ಗಮನಿಸಿ! ನಾಳೆಯಿಂದ ಪಿಂಕ್ ಲೈನ್ ಮೆಟ್ರೋ ಆರಂಭ; ಮೊದಲ ರೈಲು, ಕೊನೆಯ ರೈಲು ಸಮಯ ಇಲ್ಲಿದೆ

ಬೆಂಗಳೂರಿಗರೇ ಗಮನಿಸಿ! ನಾಳೆಯಿಂದ ಪಿಂಕ್ ಲೈನ್ ಮೆಟ್ರೋ ಆರಂಭ; ಮೊದಲ ರೈಲು, ಕೊನೆಯ ರೈಲು ಸಮಯ ಇಲ್ಲಿದೆ

November 13, 2026
ಬರದ ಸಂಕಷ್ಟದಲ್ಲಿರುವ ರೈತರ ಜೊತೆ ದೀಪಾವಳಿ ಆಚರಿಸಿದ ಅನಿಲ ಮೆಣಸಿನಕಾಯಿ; ಪೂಜೆ, ಯಜ್ಞದ ಮೂಲಕ ಮಳೆಗಾಗಿ ಪ್ರಾರ್ಥನೆ

ಬರದ ಸಂಕಷ್ಟದಲ್ಲಿರುವ ರೈತರ ಜೊತೆ ದೀಪಾವಳಿ ಆಚರಿಸಿದ ಅನಿಲ ಮೆಣಸಿನಕಾಯಿ; ಪೂಜೆ, ಯಜ್ಞದ ಮೂಲಕ ಮಳೆಗಾಗಿ ಪ್ರಾರ್ಥನೆ

November 13, 2026
ಜಾಗತಿಕ ಮಟ್ಟದಲ್ಲಿ ಮಿಂಚಿದ ಗದಗದ ಪ್ರತಿಭೆ; ACCA ಪರೀಕ್ಷೆಯಲ್ಲಿ ಪೂಜಾ ದಾನಿ ಸಾಧನೆ

ಜಾಗತಿಕ ಮಟ್ಟದಲ್ಲಿ ಮಿಂಚಿದ ಗದಗದ ಪ್ರತಿಭೆ; ACCA ಪರೀಕ್ಷೆಯಲ್ಲಿ ಪೂಜಾ ದಾನಿ ಸಾಧನೆ

November 13, 2026
ಬಿಜೆಪಿಗೆ ಮತ ಹಾಕಿದರೆ 5 ಗ್ಯಾರಂಟಿ ಬಂದ್ ಆಗುತ್ತಾ? ಸಚಿವ ತಂಗಡಗಿ ಹೇಳಿದ್ದೇನು?

ಬಿಜೆಪಿಗೆ ಮತ ಹಾಕಿದರೆ 5 ಗ್ಯಾರಂಟಿ ಬಂದ್ ಆಗುತ್ತಾ? ಸಚಿವ ತಂಗಡಗಿ ಹೇಳಿದ್ದೇನು?

November 13, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ಬೆಂಗಳೂರಿಗರೇ ಗಮನಿಸಿ! ನಾಳೆಯಿಂದ ಪಿಂಕ್ ಲೈನ್ ಮೆಟ್ರೋ ಆರಂಭ; ಮೊದಲ ರೈಲು, ಕೊನೆಯ ರೈಲು ಸಮಯ ಇಲ್ಲಿದೆ

ಬೆಂಗಳೂರಿಗರೇ ಗಮನಿಸಿ! ನಾಳೆಯಿಂದ ಪಿಂಕ್ ಲೈನ್ ಮೆಟ್ರೋ ಆರಂಭ; ಮೊದಲ ರೈಲು, ಕೊನೆಯ ರೈಲು ಸಮಯ ಇಲ್ಲಿದೆ

November 13, 2026
ಬರದ ಸಂಕಷ್ಟದಲ್ಲಿರುವ ರೈತರ ಜೊತೆ ದೀಪಾವಳಿ ಆಚರಿಸಿದ ಅನಿಲ ಮೆಣಸಿನಕಾಯಿ; ಪೂಜೆ, ಯಜ್ಞದ ಮೂಲಕ ಮಳೆಗಾಗಿ ಪ್ರಾರ್ಥನೆ

ಬರದ ಸಂಕಷ್ಟದಲ್ಲಿರುವ ರೈತರ ಜೊತೆ ದೀಪಾವಳಿ ಆಚರಿಸಿದ ಅನಿಲ ಮೆಣಸಿನಕಾಯಿ; ಪೂಜೆ, ಯಜ್ಞದ ಮೂಲಕ ಮಳೆಗಾಗಿ ಪ್ರಾರ್ಥನೆ

November 13, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper