HomeKarnataka Newsದಾವಣಗೆರೆ ಚಿತ್ರಣ ಬದಲು ಮಾಡಿದ ಹಿರಿಮೆ ಶಾಮನೂರು ಶಿವಶಂಕರಪ್ಪ ಅವರಿಗೆ ಸಲ್ಲುತ್ತದೆ: ದಿನೇಶ್ ಗುಂಡೂರಾವ್‌ 

ದಾವಣಗೆರೆ ಚಿತ್ರಣ ಬದಲು ಮಾಡಿದ ಹಿರಿಮೆ ಶಾಮನೂರು ಶಿವಶಂಕರಪ್ಪ ಅವರಿಗೆ ಸಲ್ಲುತ್ತದೆ: ದಿನೇಶ್ ಗುಂಡೂರಾವ್‌ 

For Dai;y Updates Join Our whatsapp Group

ಬೆಳಗಾವಿ: ದಾವಣಗೆರೆ ಚಿತ್ರಣ ಬದಲು ಮಾಡಿದ ಹಿರಿಮೆ ಶಾಮನೂರು ಶಿವಶಂಕರಪ್ಪ ಅವರಿಗೆ ಸಲ್ಲುತ್ತದೆ ಎಂದು ಸಚಿವ ದಿನೇಶ್ ಗುಂಡೂರಾವ್‌ ಹೇಳಿದ್ದಾರೆ. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಶಾಮನೂರು ಶಿವಶಂಕರಪ್ಪ ಅವರು ಮೃತರಾಗಿದ್ದು ಅತ್ಯಂತ ದುಃಖಕರ ವಿಷಯ. ದಾವಣಗೆರೆ ಚಿತ್ರಣ ಬದಲು ಮಾಡಿದ ಹಿರಿಮೆ ಅವರಿಗೆ ಸಲ್ಲುತ್ತದೆ.

ಹಲವು ಶಿಕ್ಷಣ, ವೈದ್ಯಕೀಯ ಸಂಸ್ಥೆಗಳನ್ನು ಸ್ಥಾಪಿಸಿದ್ದರು. ಶಿಕ್ಷಣ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಬಹಳ ಹೆಸರು ಮಾಡಿದ್ದರು. ಸಚಿವರಾಗಿ, ಶಾಸಕರಾಗಿ, ಕಾಂಗ್ರೆಸ್ ಪಕ್ಷದಲ್ಲಿ ಖಜಾಂಚಿಯಾಗಿ ಸೇವೆ ಸಲ್ಲಿಸಿದವರು. ತಮ್ಮ ಅಭಿಪ್ರಾಯವನ್ನು ಚುಟುಕಾಗಿ ಹೇಳುತ್ತಿದ್ದರು‌. ನೇರನುಡಿಗೆ ಹೆಸರಾಗಿದ್ದರು.

ದೊಡ್ಡ ಶಕ್ತಿ ಕಳೆದುಕೊಂಡಿದ್ದೇವೆ. ಪರಿಪೂರ್ಣ ಮತ್ತು ಯಶಸ್ವಿ ಜೀವನ ಅವರದಾಗಿತ್ತು.‌ ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ನೀಡಲಿ. ಇಂದು ವಿಧಾನಪರಿಷತ್​ನಲ್ಲಿ ನನ್ನದು ಹಾಜರಾತಿ ಇದೆ. ಅಲ್ಲಿ ಸಂತಾಪ ಸೂಚಿಸಿ ಬಳಿಕ ಸದನ ಮುಂದೂಡಲಾಗುತ್ತದೆ. ಸಾಯಂಕಾಲ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುತ್ತೇನೆ” ಎಂದು ತಿಳಿಸಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img