ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕಾಗಿ 5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಎರಡು ಹನಿ ಪಲ್ಸ್ ಪೋಲಿಯೋ ಲಸಿಕೆ ತಪ್ಪದೇ ಹಾಕಿಸಿ ಎಂದು ತಾಲೂಕಾ ವೈದ್ಯಾಧಿಕಾರಿ ಡಾ. ಶ್ರೀಕಾಂತ ಕಾಟೇವಾಲೆ ಹೇಳಿದರು.
ಅವರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಮಾತನಾಡಿ, ಪೋಷಕರು ಯಾವುದೇ ವದಂತಿಗಳಿಗೆ ಕಿವಿಕೊಡದೇ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಿ ಪೋಲಿಯೋ ಮುಕ್ತ ಸಮಾಜಕ್ಕಾಗಿ ಕೈಜೋಡಿಸಬೇಕು. ಡಿ.24ರೊಳಗೆ 5 ವರ್ಷದ ಮಕ್ಕಳಿಗೆ ಹತ್ತಿರದ ಪೋಲಿಯೋ ಕೇಂದ್ರಗಳಿಗೆ ಭೇಟಿ ಕೊಟ್ಟು ಪೋಲಿಯೋ ಹಾಕಿಸಿ. ತಾಲೂಕಿನಲ್ಲಿ ಆರೋಗ್ಯ ಕಾರ್ಯಕರ್ತೆಯರು, ಆಶಾ-ಅಂಗನವಾಡಿ ಕಾರ್ಯಕರ್ತೆಯರು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ತಾಲೂಕಿನಲ್ಲಿ ಒಟ್ಟು 12050 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಿದ್ದೇವೆ. ಪೋಲಿಯೋ ರೋಗ ಬರದಂತೆ ತಡೆಯುವುದು ಎಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಈ ವೇಳೆ ಡಾ. ಪ್ರವೀಣ ಸಜ್ಜನ, ಆರೋಗ್ಯ ಶಿಕ್ಷಣಾಧಿಕಾರಿ ಪ್ರಕಾಶ ಕರ್ಜಗಿ, ಎಫ್.ಸಿ. ಹೊಸಮಠ, ಗಂಗಾಧರ ಮೆಣಸಿನಕಾಯಿ, ಪ್ರವೀಣ ಬೋಮಲೆ, ನವೀನ ಹಿರೇಮಠ, ಬಸವರಾಜ ಕಲ್ಲೂರ, ವಿಜಯ ಕುಂಬಾರ, ದುಂಡೇಶ ಕೋಟಗಿ, ಜಾಹೀರ ಮೊಮೀನ್, ಮಂಜುನಾಥ ಬಸಾಪುರ, ರಮೇಶ ಹಾಳದೋಟದ, ಭೀಮಣ್ಣ ಯಂಗಾಡಿ, ರವಿ ಕೋರಿ, ರುದ್ರಪ್ಪ ಉಮಚಗಿ, ಸಿಬ್ಬಂದಿಗಳಾದ ಶ್ವೇತಾ ಶಿರೋಳ, ಆಶಾ ಭಂಡಾರಿ, ರೇಣುಕಾ ಡೊಂಬರ, ಸುಧಾ ಕಂತ್ರೋಜಿ, ಬಿ.ಎಸ್. ನಾಗಣ್ಣವರ, ರೇಖಾ ಶಿರಹಟ್ಟಿ, ಸೀತಾ ಅಮ್ಮಿನಬಾವಿ ಮುಂತಾದವರು ಇದ್ದರು. ಪಟ್ಟಣದ ಬಸ್ ನಿಲ್ದಾಣ, ಮಾರ್ಕೆಟ್-ಶಾಲೆ, ಅಂಗನವಾಡಿ, ದೇವಸ್ಥಾನ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಪೋಲಿಯೋ ಹನಿ ಹಾಕುವ ಕಾರ್ಯ ಮಾಡಿದರು.



