‘ಬಿಗ್ ಬಾಸ್ ಕನ್ನಡ ಸೀಸನ್ 12’ ಫ್ಯಾಮಿಲಿ ವೀಕ್‌ನಲ್ಲಿ ಕಾವ್ಯಾ ಶೈವ–ಗಿಲ್ಲಿ ನಟ ಜೋಡಿ ಮತ್ತೊಮ್ಮೆ ಪ್ರೇಕ್ಷಕರ ಹೃದಯ ಗೆದ್ದಿದೆ. ಆರಂಭದಿಂದಲೂ ಕ್ಲೋಸ್ ಆಗಿರುವ ಈ ಜೋಡಿ, ಇದೀಗ ಮದುವೆ ಮಾತುಕತೆ ಮೂಲಕ ಹೊಸ ಚರ್ಚೆಗೆ ಕಾರಣವಾಗಿದೆ.
ಕಾವ್ಯಾ ಪೋಷಕರು ದೊಡ್ಮನೆಗೆ ಬಂದಾಗ ಮದುವೆ ವಿಷಯವೇ ಚರ್ಚೆಯಾಗಬೇಕು ಎಂಬ ಆಸೆಯನ್ನು ಗಿಲ್ಲಿ ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. “ನಾಳೆ ನಿಶ್ಚಿತಾರ್ಥಕ್ಕೆ ಯಾರು ಬರುತ್ತಾರೋ?” ಎಂದು ಗಿಲ್ಲಿ ಕಾವ್ಯಾವನ್ನು ರೇಗಿಸಿದರೆ, ಕಾವ್ಯಾ ಕೂಡ ತಿರುಗೇಟು ನೀಡಿ ಫನ್ನಿ ವಾತಾವರಣ ಸೃಷ್ಟಿಸಿದ್ದಾರೆ.
ಈ ವೇಳೆ ಕಾವ್ಯಾ ತಾಯಿ ಸಾವಿತ್ರಿ ಅವರು ಗಿಲ್ಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, “ಗಿಲ್ಲಿಯನ್ನು ಎಂದಿಗೂ ಬಿಟ್ಟುಕೊಡಬೇಡ. ಅವನು ನಿನ್ನನ್ನು ಯಾವಾಗಲೂ ಬಿಟ್ಟುಕೊಟ್ಟಿಲ್ಲ. ಹಣ್ಣು, ಮೊಟ್ಟೆ ಕೇಳಿದರೆ ಕೊಡು” ಎಂದು ಹೇಳಿದ್ದು ಮನೆಯಲ್ಲಿದ್ದ ಎಲ್ಲರನ್ನೂ ನಗಿಸಿದೆ.
ಪ್ರೇಕ್ಷಕರಿಗೂ ಗಿಲ್ಲಿ ನಟ ಸಖತ್ ಫೇವರಿಟ್ ಆಗಿದ್ದಾರೆ. ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಧ್ರುವಂತ್ ಮನೆಯವರಿಗೆ ಗಿಲ್ಲಿ ಆಟ ಮೆಚ್ಚುಗೆಯಾಗಿದೆ. ಈಗಾಗಲೇ ನಾಲ್ಕು ವೋಟ್ ಪಡೆದುಕೊಂಡಿರುವ ಗಿಲ್ಲಿ ಈ ವಾರದ ಕ್ಯಾಪ್ಟನ್ ಆಗುತ್ತಾರಾ ಎಂಬ ಕುತೂಹಲ ಹೆಚ್ಚಾಗಿದೆ.



