ಬೇರೆ ದೇಶಗಳಿಗೆ ಹೋಲಿಸಿದೆರೆ, ಭಾರತೀಯರಿಗೆ ಅದರಲ್ಲೂ ಮಹಿಳೆಯರಿಗೆ ಚಿನ್ನ ಅಂದರೆ ಪ್ರೀತಿ. ಯಾವುದೇ ಸಮಾರಂಭ ಇರಲಿ, ಹಬ್ಬವಿರಲಿ ಅವರು ಮೊದಲು ಕೇಳುವುದೇ ಚಿನ್ನ. ಈ ಹಬ್ಬಕ್ಕಾದ್ರೂ ಒಂದು ಸ್ವಲ್ಪ ಬಂಗಾರ ತೆಗೆದುಕೊಳ್ಳೋಣ ಅನ್ನೋ ಬೇಡಿಕೆ ಇವರ ಬಾಯಲ್ಲಿ ಬರುತ್ತದೆ.
ಆದರೆ ಈಗ ಏರುತ್ತಿರುವ ಬೆಲೆ ನೋಡಿದರೆ ಬಂಗಾರ ಮುಟ್ಟಂಗಿಲ್ಲ ಅನ್ನೋ ರೀತಿ ಆಗಿದೆ. ಭಾರತ ಸೇರಿ ವಿಶ್ವದಲ್ಲಿಯೇ ಚಿನ್ನಕ್ಕೆ ಚಿನ್ನ ಮಾತ್ರವೇ ಸಾಟಿ ಎನ್ನುವಂತಾಗಿದೆ. ಇತ್ತೀಚಿನ ವರ್ಷಗಳಲ್ಲಿ ಯಾರೂ ಊಹಿಸದ ರೀತಿಯಲ್ಲಿ ಚಿನ್ನ ತನ್ನ ಬೆಲೆ ಹೆಚ್ಚಿಸಿಕೊಂಡಿದೆ.
ಇಂದು ಸೋಮವಾರ ಚಿನ್ನದ ಬೆಲೆ ಇಳಿಕೆಯಾದರೆ, ಬೆಳ್ಳಿ ಬೆಲೆ ಭರ್ಜರಿಯಾಗಿ ಏರಿದೆ. ಆಭರಣ ಚಿನ್ನದ ಬೆಲೆ 13,055 ರೂನಿಂದ 12,990 ರೂಗೆ ಇಳಿದಿದೆ. ಅಪರಂಜಿ ಚಿನ್ನದ ಬೆಲೆ 14,192 ರೂನಿಂದ 14,122 ರೂಗೆ ಇಳಿದಿದೆ. ಬೆಳ್ಳಿ ಬೆಲೆ ಬೆಂಗಳೂರು, ಮುಂಬೈ ಮೊದಲಾದೆಡೆ 251 ರೂನಿಂದ 258 ರೂಗೆ ಏರಿದೆ. ಚೆನ್ನೈ ಮೊದಲಾದ ಕೆಲವೆಡೆ ಬೆಲೆ 281 ರೂ ಆಗಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,29,900 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,41,710 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,800 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,29,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 25,800 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 28,100 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಡಿಸೆಂಬರ್ 29ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,171 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,990 ರೂ
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,628 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 258 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,171 ರೂ
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,990 ರೂ
- ಬೆಳ್ಳಿ ಬೆಲೆ 1 ಗ್ರಾಂಗೆ: 258 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 12,990 ರೂ
- ಚೆನ್ನೈ: 13,020 ರೂ
- ಮುಂಬೈ: 12,990 ರೂ
- ದೆಹಲಿ: 13,005 ರೂ
- ಕೋಲ್ಕತಾ: 12,990 ರೂ
- ಕೇರಳ: 12,990 ರೂ
- ಅಹ್ಮದಾಬಾದ್: 12,995 ರೂ
- ಜೈಪುರ್: 13,005 ರೂ
- ಲಕ್ನೋ: 13,005 ರೂ
- ಭುವನೇಶ್ವರ್: 12,990 ರೂ



