ವಿಜಯಸಾಕ್ಷಿ ಸುದ್ದಿ, ಗದಗ: ಇಲ್ಲಿನ ಸಿದ್ದಲಿಂಗ ನಗರದ ಬಸವೇಶ್ವರ ಪ್ರೌಢಶಾಲೆಯಲ್ಲಿ 2014-15ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯೋಪಾಧ್ಯಾಯ ಎಸ್.ಬಿ. ಗೌಡರ ವಹಿಸಿಕೊಂಡಿದ್ದರು. ಎಮ್.ಎಮ್. ಪಿಯು ಕಾಲೇಜು ಉಪನ್ಯಾಸಕ ಎಸ್.ಬಿ. ಹಿರೇಮಠ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ವೇಳೆ ಮುಖ್ಯೋಪಾಧ್ಯಾಯ ಕೆ.ವಿ. ಕೋರಡ್ಡಿ, ಅಲಿ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯರಾದ ಖಾಲಿದಾ ಸಬೀನ್ ಎಸ್.ಗುಳೇದಗುಡ್ಡ ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಬಿ.ಕೆ. ನಿಂಬನಗೌಡರ, ಎಚ್.ಎಸ್. ಕರಕಣ್ಣವರ, ಬಿ.ಬಿ. ಸಂಕನೂರ, ಸಿ.ಎಸ್. ಮಾನ್ವಿ, ಎಂ.ಎಸ್. ರಾಮಣ್ಣವರ, ಬಿ.ಬಿ. ಇಬ್ರಾಹಿಂಪೂರ, ಎಸ್.ಎಚ್. ಭಜಂತ್ರಿ, ಆರ್.ಕೆ. ಶಿವನಗೌಡರ, ಆರ್.ಐ. ಆದ್ವಾನಿ, ಬಿ.ಎಸ್. ಬೇವಿನಮರದ ಮುಂತಾದವರು ಭಾಗವಹಿಸಿದ್ದರು.



