HomeEntertainmentʻನನ್ನ ದೇಹ ಚರ್ಚೆಯ ವಸ್ತುವಲ್ಲʼ: ಸಾನ್ವಿ ಮಾತಿಗೆ ಬೆಂಬಲ ನೀಡಿದ ಕಿಚ್ಚ ಸುದೀಪ್

ʻನನ್ನ ದೇಹ ಚರ್ಚೆಯ ವಸ್ತುವಲ್ಲʼ: ಸಾನ್ವಿ ಮಾತಿಗೆ ಬೆಂಬಲ ನೀಡಿದ ಕಿಚ್ಚ ಸುದೀಪ್

For Dai;y Updates Join Our whatsapp Group

Spread the love

‘ಮಾರ್ಕ್’ ಸಿನಿಮಾ ಬಿಡುಗಡೆಯ ಬಳಿಕ ಆರಂಭವಾದ ಫ್ಯಾನ್ಸ್‌ವಾರ್ ಇದೀಗ ಸುದೀಪ್ ಕುಟುಂಬದವರೆಗೂ ತಲುಪಿದ್ದು, ನಟ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸುದೀಪ್ ಗುರಿಯಾಗಿದ್ದಾರೆ. ಕೆಲ ಕಿಡಿಗೇಡಿಗಳು ಸೋಶಿಯಲ್ ಮೀಡಿಯಾದಲ್ಲಿ ಅಸಭ್ಯ ಹಾಗೂ ಅವಮಾನಕಾರಿ ಕಾಮೆಂಟ್ಸ್ ಮಾಡಿದ್ದು, ಇದಕ್ಕೆ ಸಾನ್ವಿ ನೇರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ʻನನ್ನ ದೇಹ ಇನ್ಯಾರದ್ದೋ ಚರ್ಚೆಯ ವಿಷಯವಲ್ಲ. ನನಗೆ ನಿಮ್ಮ ಅಭಿಪ್ರಾಯ ಬೇಕಿದ್ದರೆ ನಾನು ಕೇಳುತ್ತೇನೆʼ ಎಂದು ಸಾನ್ವಿ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದು ಟ್ರೋಲಿಗರಿಗೆ ತಿರುಗೇಟು ನೀಡಿದ್ದರು. ಈ ಹೇಳಿಕೆ ಭಾರೀ ವೈರಲ್ ಆಗಿತ್ತು.

ಈಗ ಈ ವಿಷಯದ ಬಗ್ಗೆ ಮಾತನಾಡಿರುವ ಕಿಚ್ಚ ಸುದೀಪ್, ತಮ್ಮ ಮಗಳ ಪ್ರತಿಕ್ರಿಯೆಯನ್ನು ಸಮರ್ಥಿಸಿಕೊಂಡಿದ್ದಾರೆ. ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು,
“ನನ್ನ ಮಗಳು ಮಾತನಾಡಿದ್ದು ತಪ್ಪಾ? ಯಾವ ಹೆಣ್ಣುಮಕ್ಕಳಾದ್ರೂ ಈ ರೀತಿ ಮಾತನಾಡ್ತಾರೆ. ಹೆಣ್ಣಾಗಿ ಏನ್ ಮಾಡ್ಬೇಕೋ ಅದನ್ನೇ ನನ್ನ ಮಗಳು ಮಾಡಿದ್ದಾಳೆ” ಎಂದು ಹೇಳಿದ್ದಾರೆ.

ಮಾರ್ಕ್ ಸಿನಿಮಾ ಹಿಟ್ ಆದ ಬೆನ್ನಲ್ಲೇ ಫ್ಯಾನ್ಸ್‌ವಾರ್ ಉಗ್ರವಾಗಿದ್ದು, ಅದರಲ್ಲಿ ಕುಟುಂಬವನ್ನೇ ಎಳೆತಂದ ಕಿಡಿಗೇಡಿಗಳ ವಿರುದ್ಧ ಸುದೀಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನನ್ನ ಮಗಳು ನನಗಿಂತ ಹೆಚ್ಚು ಧೈರ್ಯವಂತಳು” ಎಂದು ಹೇಳುವ ಮೂಲಕ ಸಾನ್ವಿಯ ಧೈರ್ಯವನ್ನು ಶ್ಲಾಘಿಸಿದ್ದಾರೆ.

ಈ ಘಟನೆ ಸ್ಯಾಂಡಲ್‌ವುಡ್‌ನಲ್ಲಿ ಮಾತ್ರವಲ್ಲದೆ, ಸೋಶಿಯಲ್ ಮೀಡಿಯಾದಲ್ಲೂ ಮಹಿಳೆಯರ ಗೌರವ ಮತ್ತು ಟ್ರೋಲಿಂಗ್ ಕುರಿತ ಚರ್ಚೆಗೆ ಕಾರಣವಾಗಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!