ಆನೇಕಲ್:- ಕಳೆದ ಜ.9ರಂದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಚಂದಾಪುರದಲ್ಲಿ ನಡೆದಿದ್ದ ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ.
ಈ ಹಿಂದೆ ಮೃತಳ ತಾಯಿ ಕಾಲೇಜು ಆಡಳಿತ ಮಂಡಳಿ ವಿರುದ್ಧ ಆರೋಪಿಸಿ, ಕಣ್ಣು ನೋವಿನಿಂದ ಕಾಲೇಜಿಗೆ ರಜೆ ಹಾಕಿದ್ದಕ್ಕೆ ಕ್ಲಾಸ್‌ನಲ್ಲಿ ಅವಮಾನಿಸಿದ್ದಾರೆ ಹಾಗೂ ಅವರ ಕಿರುಕುಳ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದಿದ್ದರು. ಆದರೆ ಇದೀಗ ಡೆತ್‌ನೋಟ್ ಸಿಕ್ಕಿದೆ.
ಮೃತ ಯಶಸ್ವಿನಿ ಡೆತ್‌ನೋಟ್‌ನಲ್ಲಿ ನಾನು ಬದುಕಕ್ಕೆ ಯೋಗ್ಯಳಲ್ಲ, ಕ್ಷಮಿಸಿಬಿಡಿ. ನನ್ನ ಸಾವಿಗೆ ಯಾರು ಕಾರಣರಲ್ಲ. ನಾನು ಒಳ್ಳೆಯ ಮಗಳಲ್ಲ. ಅಮ್ಮ Thank You So Much ಎಂದು ಬರೆದಿದ್ದಾಳೆ. ಇನ್ನೂ ಕಾಲೇಜಿನಲ್ಲಿ ಮೃತ ಯಶಸ್ವಿನಿ ಅಳುತ್ತಾ ಕುಳಿತಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಾಲೇಜು ಸಿಬ್ಬಂದಿ ಹಾಗೂ ಸೀನಿಯರ್ ಯಶಸ್ವಿನಿಗೆ ಕಿರುಕುಳ ನೀಡುತ್ತಿದ್ದರು. ಅಲ್ಲದೇ ಬರೋದು ಸ್ಲಂನಿಂದ ಕೋತಿಯ ಹಾಗೆ ಇದ್ದೀಯಾ ಎಂದು ಅವಮಾನಿಸಿದ್ದರು. ಈ ಬಗ್ಗೆ ಪೋಷಕರು ಆಡಳಿತ ಮಂಡಳಿಗೆ ದೂರು ನೀಡಿದ್ದರು ಎಂದು ತಿಳಿದುಬಂದಿದೆ.



