ʻಬಿಗ್ ಬಾಸ್ʼ ಮನೆಗೆ ಒಂಟಿಯಾಗಿ ಎಂಟ್ರಿ ಕೊಟ್ಟ ಧ್ರುವಂತ್, ತಮ್ಮದೇ ವಿಭಿನ್ನ ಸ್ಟೈಲ್‌ನಿಂದ ವೀಕ್ಷಕರನ್ನು ಸಿಕ್ಕಾಪಟ್ಟೆ ಎಂಟರ್‌ಟೈನ್ ಮಾಡಿದ್ದರು.
ವಾರದಷ್ಟೇ ಅಲ್ಲ, ಇಡೀ ಸೀಸನ್‌ನಲ್ಲೇ ʻಕಿಚ್ಚನ ಚಪ್ಪಾಳೆʼ ಪಡೆದುಕೊಂಡ ಸ್ಪರ್ಧಿಯಾಗಿದ್ದ ಧ್ರುವಂತ್, ಕಿಚ್ಚ ಸುದೀಪ್ ಅವರ ಮೆಚ್ಚುಗೆಗೂ ಪಾತ್ರರಾಗಿದ್ದರು. ಈ ಚಪ್ಪಾಳೆಯ ಬಳಿಕ ಧ್ರುವಂತ್ ಅವರ ಆತ್ಮವಿಶ್ವಾಸವೂ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗಿತ್ತು.
ಆದರೆ ʻಒನ್ ಮ್ಯಾನ್ ಆರ್ಮಿʼ ಆಗಿ ಆಟ ಆಡುತ್ತಿದ್ದೇನೆ ಎಂದುಕೊಂಡಿದ್ದ ಧ್ರುವಂತ್‌ಗೆ ಮಿಡ್‌ವೀಕ್ ಎಲಿಮಿನೇಷನ್‌ನಲ್ಲಿ ಭಾರೀ ಶಾಕ್ ಎದುರಾಗಿದೆ. 100ಕ್ಕೂ ಹೆಚ್ಚು ದಿನಗಳ ಕಾಲ ʻಬಿಗ್ ಬಾಸ್ʼ ಮನೆಯಲ್ಲಿ ಉಳಿದಿದ್ದ ಅವರು, ಕೊನೆಯ ಕ್ಷಣದಲ್ಲಿ ಶೋನಿಂದ ಹೊರಬಿದ್ದಿದ್ದಾರೆ.
ಶೋಗೆ ಎಂಟ್ರಿ ಕೊಟ್ಟ ಕೆಲವೇ ವಾರಗಳಲ್ಲಿ ʻಈ ಶೋ ನನಗಲ್ಲ, ಇಲ್ಲಿರೋದಕ್ಕೆ ಇಷ್ಟ ಇಲ್ಲ, ನಾನು ಹೊರಗೆ ಹೋಗಬೇಕುʼ ಎಂದು ಪದೇಪದೇ ಹೇಳುತ್ತಿದ್ದ ಧ್ರುವಂತ್, ವೀಕೆಂಡ್ ಎಪಿಸೋಡ್‌ನಲ್ಲೇ ಕಿಚ್ಚ ಸುದೀಪ್ ಅವರ ಎದುರು ʻನಾನು ಮನೆಗೆ ಹೋಗ್ತೀನಿʼ ಎಂದು ಹೇಳಿದ್ದರು. ಆದರೆ ಸೀಕ್ರೆಟ್ ರೂಮ್‌ಗೆ ಹೋಗಿ ಬಂದ ನಂತರ ಅವರ ಆಟದಲ್ಲೇ ದೊಡ್ಡ ಬದಲಾವಣೆ ಕಂಡುಬಂದಿತ್ತು.
ಸೀಕ್ರೆಟ್ ರೂಮ್‌ನ ಅನುಭವದ ಬಳಿಕ ಧ್ರುವಂತ್ ಅವರ ಆತ್ಮವಿಶ್ವಾಸ ದ್ವಿಗುಣಗೊಂಡಿದ್ದು, ಟಾಸ್ಕ್‌ಗಳಲ್ಲೂ ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದರು. ಫಿನಾಲೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಧ್ರುವಂತ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಿಗೆ ದೊಡ್ಡ ನಿರಾಸೆ ತಂದಿದೆ.
ಧ್ರುವಂತ್ ಹೊರಬಿದ್ದ ಬಳಿಕ ಇದೀಗ ಅಶ್ವಿನಿ ಗೌಡ, ಧನುಷ್, ಗಿಲ್ಲಿ ನಟ, ಕಾವ್ಯ ಶೈವ, ರಘು ಹಾಗೂ ರಕ್ಷಿತಾ ಶೆಟ್ಟಿ ಫಿನಾಲೆಗೆ ಪ್ರವೇಶ ಪಡೆದ ಸ್ಪರ್ಧಿಗಳಾಗಿ ಉಳಿದಿದ್ದಾರೆ.



