ವಿಜಯಸಾಕ್ಷಿ ಸುದ್ದಿ, ಗದಗ: ನಗರದಲ್ಲಿ ಜ. 19ರಂದು ಬೆಳಿಗ್ಗೆ 10.30ಕ್ಕೆ ಸೈನಿಕ ತರಬೇತಿ ಕೇಂದ್ರ ಆರಂಭವಾಗಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಜಿ.ಬಿ. ಮಾಲಗತ್ತಿಮಠ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆದಿತ್ಯ ನಗರದಲ್ಲಿ 5 ಗುಂಟೆ ಜಾಗೆಯಲ್ಲಿ ಸಮುದಾಯದ ಭವನ ನಿರ್ಮಿಸಲಾಗಿದೆ. ಸಮುದಾಯ ಭವನದಲ್ಲಿ ತರಬೇತಿ ಕೇಂದ್ರ ಆರಂಭಿಸಲಾಗುತ್ತಿದ್ದು, ತಜ್ಞರು ತರಬೇತಿ ನೀಡುವರು ಎಂದರು.
ನಗರದಲ್ಲಿ ಯುವಕರಿಗೆ ತರಬೇತಿಯ ಕೊರತೆ ಇದೆ. ಸೇನೆಯ ಬಗ್ಗೆ ಜಾಗೃತಿ ಮೂಡಿಸುವವರು ಇಲ್ಲವಾಗಿದೆ. ಯುವಕರಿಗೆ ಜಾಗೃತಿ ಜೊತೆಗೆ ಬಿಎಸ್ಎಫ್, ಅಗ್ನಿವೀರ ಹಾಗೂ ಕೇಂದ್ರ ಯೋಜನೆಗಳ ಬಗ್ಗೆ ತರಬೇತಿ ನೀಡಲಾಗುವುದು. ಜಿಲ್ಲಾದ್ಯಂತ ಶಾಲಾ-ಕಾಲೇಜುಗಳಲ್ಲಿ ಈ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.
ಜ. 18ರಂದು ಯುವಕರಿಗೆ ಪೂರ್ವಭಾವಿ ಪರೀಕ್ಷೆ ನಡೆಸಲಾಗುವುದು. ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರಿಗೆ ಬಹುಮಾನ ನೀಡಲಾಗುವುದು. ಪ್ರಶ್ನೆಪತ್ರಿಕೆಯನ್ನು ಅಗ್ನಿವೀರ ಮಾದರಿಯಲ್ಲೇ ಸಿದ್ಧಪಡಿಸಲಾಗಿದೆ. ತರಬೇತಿ ಕೇಂದ್ರದಲ್ಲೇ ಊಟ-ವಸತಿ ನೀಡಲಾಗುವುದು. ಮೂರು ತಿಂಗಳ ಅವಧಿಗೆ ತರಬೇತಿ ಇರುತ್ತದೆ ಎಂದು ಜಿ.ಬಿ. ಮಾಲಗತ್ತಿಮಠ ತಿಳಿಸಿದರು.
ಫಕ್ಕಿರೇಶ್ವರ ಶ್ರೀಗಳು, ಸಂಗಮೇಶ ದುಂದೂರು, ಸಿದ್ದಣ್ಣ ಪಲ್ಲೇದ ಸೇರಿದಂತೆ ಇತರರು ಉಪಸ್ಥಿತರಿರುವರು ಎಂದು ತಿಳಿಸಿದರು.
ಸುದೀರ್ಘ ಗೋರ್ಪಡೆ, ಎಸ್.ಆರ್. ಪಾಟೀಲ, ಸಿ.ಜಿ. ಸೊನ್ನದ, ಶೇಖಪ್ಪ ಹೊನ್ನಪ್ಪನವರ, ಚನ್ನಯ್ಯ ಬಳಗಾನೂರುಮಠ, ಕುಮಾರಸ್ವಾಮಿ ಹಿರೇಮಠ, ಜಿ.ಬಿ. ಅರವಟಗಿಮಠ, ಎ.ಎಂ. ತಹಸೀಲ್ದಾರ, ಸಿದ್ದಪ್ಪ ಹೂಗಾರು, ವೀಣಾ ಹೂಗಾರ ಇತರರು ಇದ್ದರು



