ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಭಾರೀ ಕುಸಿತ ಮುಂದುವರಿದಿದೆ. ನಿನ್ನೆ ಪ್ರತಿ ಗ್ರಾಂಗೆ ಸುಮಾರು ₹800 ಇಳಿಕೆಯಾಗಿದ್ದ ಚಿನ್ನದ ಬೆಲೆ, ಇಂದು (ಶನಿವಾರ) ಮತ್ತೊಮ್ಮೆ ₹920 ರಷ್ಟು ಕಡಿಮೆಯಾಗಿದೆ. ಹೀಗೆ ಎರಡು ದಿನಗಳಲ್ಲಿ ಚಿನ್ನದ ಬೆಲೆ ಒಟ್ಟಾರೆ ₹1,500ಕ್ಕೂ ಅಧಿಕ ಇಳಿಕೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನದ ಬೆಲೆ ಹಲವು ದೇಶಗಳಲ್ಲಿ ಕುಸಿತ ಕಂಡಿದೆ. ಇದರ ಪರಿಣಾಮವಾಗಿ ದೇಶೀಯ ಮಾರುಕಟ್ಟೆಯಲ್ಲೂ ಚಿನ್ನದ ದರ ತೀವ್ರವಾಗಿ ಇಳಿಕೆಯಾಗಿದೆ.
ಇನ್ನು ಬೆಳ್ಳಿ ಬೆಲೆಯೂ ಮಹಾಕುಸಿತ ಅನುಭವಿಸಿದೆ. ಒಂದೇ ದಿನದಲ್ಲಿ ಪ್ರತಿ ಗ್ರಾಂಗೆ ₹45 ರಷ್ಟು ಇಳಿಕೆಯಾದರೆ, ಕಳೆದ ಎರಡು ದಿನಗಳಲ್ಲಿ ಒಟ್ಟಾರೆ ₹60 ರಷ್ಟು ಬೆಳ್ಳಿ ಬೆಲೆ ಕುಸಿದಿದೆ.
ಪ್ರಸ್ತುತ ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,47,200 ಆಗಿದ್ದು, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ ₹1,60,580 ತಲುಪಿದೆ. 100 ಗ್ರಾಂ ಬೆಳ್ಳಿ ಬೆಲೆ ₹35,000 ಇದೆ.
ಬೆಂಗಳೂರಿನಲ್ಲೂ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಇಳಿಕೆ ದಾಖಲಾಗಿದ್ದು, 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,47,200 ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ ₹35,000 ಇದೆ. ತಮಿಳುನಾಡು, ಕೇರಳ ಸೇರಿದಂತೆ ಕೆಲ ರಾಜ್ಯಗಳಲ್ಲೂ ಬೆಳ್ಳಿ ಬೆಲೆ ಇದೇ ಮಟ್ಟದಲ್ಲಿ ಮುಂದುವರಿದಿದೆ.
ಭಾರತದಲ್ಲಿ ಚಿನ್ನ–ಬೆಳ್ಳಿ ಬೆಲೆ (ಜನವರಿ 31):
- 24 ಕ್ಯಾರಟ್ ಚಿನ್ನ (1 ಗ್ರಾಂ): ₹16,058
- 22 ಕ್ಯಾರಟ್ ಚಿನ್ನ (1 ಗ್ರಾಂ): ₹14,720
- 18 ಕ್ಯಾರಟ್ ಚಿನ್ನ (1 ಗ್ರಾಂ): ₹12,044
- ಬೆಳ್ಳಿ (1 ಗ್ರಾಂ): ₹350
ಬೆಂಗಳೂರಿನಲ್ಲಿ ಚಿನ್ನ–ಬೆಳ್ಳಿ ಬೆಲೆ:
- 24 ಕ್ಯಾರಟ್ ಚಿನ್ನ (1 ಗ್ರಾಂ): ₹16,058
- 22 ಕ್ಯಾರಟ್ ಚಿನ್ನ (1 ಗ್ರಾಂ): ₹14,720
- ಬೆಳ್ಳಿ (1 ಗ್ರಾಂ): ₹350
ವಿವಿಧ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ):
- ಬೆಂಗಳೂರು: ₹14,720
- ಚೆನ್ನೈ: ₹14,900
- ಮುಂಬೈ: ₹14,720
- ದೆಹಲಿ: ₹14,735
- ಕೋಲ್ಕತಾ: ₹14,720
- ಕೇರಳ: ₹14,720
- ಅಹ್ಮದಾಬಾದ್: ₹14,725
- ಜೈಪುರ್: ₹14,735
- ಲಕ್ನೋ: ₹14,735
- ಭುವನೇಶ್ವರ: ₹14,720



