ಚಿಕ್ಕಮಗಳೂರು:- ಮದುವೆಯ ಬಗ್ಗೆ ತನ್ನ ಬಳಿ ಜ್ಯೋತಿಷ್ಯ ಕೇಳಲು ಬಂದ ಯುವತಿ ಮೇಲೆ ಅರ್ಚಕನೊಬ್ಬ ಅತ್ಯಾಚಾರ ಎಸಗಿರುವ ಆರೋಪ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಬಣಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.
ದಾವಣಗೆರೆ ಮೂಲದ ಕಾಮುಕ ಅರ್ಚಕ ಕೃಷ್ಣ ರಾವ್, 7 ವರ್ಷಗಳ ಹಿಂದಯೇ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಹೊರಟ್ಟಿ ಗ್ರಾಮಕ್ಕೆ ಬಂದು ನೆಲೆಸಿದ್ದು, ಗ್ರಾಮದ ಪಾರ್ವತಿ ಈಶ್ವರ ದೇಗುಲದ ಅರ್ಚಕನಾಗಿ ಕೆಲಸ ಮಾಡಿಕೊಂಡಿದ್ದ. ಜೊತೆ ಜೊತೆಗೆ ಜ್ಯೋತಿಷ್ಯವನ್ನ ಸಹ ಹೇಳುತ್ತಿದ್ದ. ಹೀಗಾಗಿ ದಲಿತ ಸಮುದಾಯದ 23 ವರ್ಷದ ಯುವತಿಯೊಬ್ಳು ಬಂದಿದ್ದು, ಮದ್ವೆ ವಿಷಯದಲ್ಲಿ ತೊಂದರೆ ಆಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾಳೆ. ಆಕೆಯ ಮುಗ್ದತೆಯನ್ನೇ ಬಂಡವಾಳ ಮಾಡಿಕೊಂಡ ಕೃಷ್ಣ ರಾವ್, ಯುವತಿ ಮೇಲೆ ಹಲವು ಸಲ ಅತ್ಯಾಚಾರ ಮಾಡಿದ್ದಾನೆ.
ಜಾತಕದಲ್ಲಿ ದೋಷ ಇದೆ ಎಂದು ಹೇಳಿದ್ದು, ಅದನ್ನು ಸಮಸ್ಯೆ ನಿವಾರಣೆ ಹೆಸರಲ್ಲಿ ಯುವತಿ ಮೇಲೆ ಕಳೆದೊಂದು ವರ್ಷದಲ್ಲಿ ಹಲವು ಸಲ ಅತ್ಯಾಚಾರ ಮಾಡಿದ್ದಾನೆ. ಇದೀಗ ಈಗ ಯುವತಿ ಬಣಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ದೂರನ್ನಾಧರಿಸಿ ಪೊಲೀಸರು, ಆರೋಪಿ ವಿರುದ್ಧ BNS ಕಲಂ 64(2)(m) ಹಾಗೂ ಅತ್ಯಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.



