HomeKarnataka Newsಸಿಎಂ ಆಗಮಿಸಿದ್ದ ಹಂಪಿ ಉತ್ಸವದಲ್ಲಿ ಅವಘಡ: ಸ್ವಲ್ಪದರಲ್ಲೇ ತಪ್ಪಿದ ಅನಾಹುತ!

ಸಿಎಂ ಆಗಮಿಸಿದ್ದ ಹಂಪಿ ಉತ್ಸವದಲ್ಲಿ ಅವಘಡ: ಸ್ವಲ್ಪದರಲ್ಲೇ ತಪ್ಪಿದ ಅನಾಹುತ!

For Dai;y Updates Join Our whatsapp Group

ಬಳ್ಳಾರಿ: ಹಂಪಿ ಉತ್ಸವ–2026 ಉದ್ಘಾಟಿಸಲು ಆಗಮಿಸಿದ್ದ ಸಿಎಂ ಸಿದ್ದರಾಮಯ್ಯರಿದ್ದ ವೇದಿಕೆಯ ಸಮೀಪ ಬೆಂಕಿ ಅವಘಡ ಸಂಭವಿಸಿದೆ.

ಸಿಎಂ ಸಿದ್ದರಾಮಯ್ಯ ಅವರಿದ್ದ ಮುಖ್ಯ ವೇದಿಕೆಯ ಎದುರೇ ಬೆಂಕಿ ಹೊತ್ತಿಕೊಂಡಿದೆ. ವೇದಿಕೆಯ ಬಳಿ ಪಟಾಕಿ ಸಿಡಿಸಿದ ವೇಳೆ ಬೆಂಕಿ ಹುಲ್ಲು ಮತ್ತು ಸಮೀಪದ ವಸ್ತುಗಳಿಗೆ ತಗುಲಿ ಅಘಾತದ ಪರಿಸ್ಥಿತಿ ಉಂಟಾಗಿದೆ. ವೇದಿಕೆಯ ಸಮೀಪ ದಟ್ಟ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡು ನೆರೆದಿದ್ದ ಸಾವಿರಾರು ಪ್ರೇಕ್ಷಕರು ಕೆಲ ಕ್ಷಣ ಆತಂಕಗೊಂಡಿದ್ದರು. ಆದರೆ ಸ್ಥಳದಲ್ಲಿಯೇ ನಿಯೋಜಿತ ಅಗ್ನಿಶಾಮಕ ದಳ ಸಿಬ್ಬಂದಿ ತ್ವರಿತವಾಗಿ ಬೆಂಕಿ ನಂದಿಸಲು ಯಶಸ್ವಿಯಾಗಿದ್ದಾರೆ.

ಉತ್ಸವವನ್ನು ಶುಕ್ರವಾರ ರಾತ್ರಿ ಸಿದ್ದರಾಮಯ್ಯ ಅವರು ಡೊಳ್ಳು, ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದ್ದಾರೆ. ಮೂರು ದಿನಗಳ ಈ ಹಂಪಿ ಉತ್ಸವದಲ್ಲಿ ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ಮತ್ಸ್ಯ ಮೇಳ, ಕುಸ್ತಿ, ಬೈ ಸ್ಕೈ, ಎತ್ತುಗಳ ಪ್ರದರ್ಶನ, ರಂಗೋಲಿ ಸ್ಪರ್ಧೆ, ಬೋಟಿಂಗ್, ಡ್ರೋನ್ ಪ್ರದರ್ಶನ, ಗ್ರಾಮೀಣ ಕ್ರೀಡೆಗಳು, ಕವಿಗೋಷ್ಠಿ, ಗಾಳಿಪಟ ಪ್ರದರ್ಶನ, ಯುವ ಗೋಷ್ಠಿ, ಜಾನಪದ ವಾಹಿನಿ ಸೇರಿದಂತೆ ಹಂಪಿಯ ಇತಿಹಾಸ ಮತ್ತು ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವ ನೂರಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img