ಭಾರತೀಯ ಸೇನೆಯು 2026ರ ಅಗ್ನಿವೀರ್ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
ದೇಶಸೇವೆಗೆ ತೊಡಗಿಸಿಕೊಳ್ಳಲು ಆಸಕ್ತ ಯುವಕರು ಫೆಬ್ರವರಿ 13ರಿಂದ ಏಪ್ರಿಲ್ 1ರೊಳಗೆ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗಾಗಿ ಅಧಿಕೃತ ವೆಬ್‌ಸೈಟ್: joinindianarmy.nic.in
ಅರ್ಹತೆ:
ಅಗ್ನಿವೀರ್ ಜಿಡಿ (General Duty): 10ನೇ ತರಗತಿ, ಪ್ರತಿಯೊಂದು ವಿಷಯದಲ್ಲಿ ಕನಿಷ್ಠ 33%, ಒಟ್ಟು 45%
ಅಗ್ನಿವೀರ್ ತಾಂತ್ರಿಕ: 12ನೇ ತರಗತಿ (ಭೌತಶಾಸ್ತ್ರ, ಗಣಿತ, ಇಂಗ್ಲಿಷ್) ಕನಿಷ್ಠ 50%
ಕ್ಲರ್ಕ್/ಸ್ಟೋರ್ ಕೀಪರ್: 12ನೇ ತರಗತಿ, ಇಂಗ್ಲಿಷ್ ಮತ್ತು ಗಣಿತ/ಅಕೌಂಟ್ಸ್ 50%, ಒಟ್ಟು 60%
ಟ್ರೆಡ್ಸ್‌ಮನ್: 8ನೇ ಅಥವಾ 10ನೇ ತರಗತಿ, ಪ್ರತಿಯೊಂದು ವಿಷಯದಲ್ಲಿ 33%
ಮಹಿಳಾ ಮಿಲಿಟರಿ ಪೊಲೀಸ್ (GD): 10ನೇ ತರಗತಿ, 45%
ಸೋಲ್ಜರ್ ಟೆಕ್ನಿಕಲ್ ನರ್ಸಿಂಗ್ ಸಹಾಯಕ: 12ನೇ (ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಇಂಗ್ಲಿಷ್) ಕನಿಷ್ಠ 50%
ಸಿಪಾಯಿ ಫಾರ್ಮಾ: ಡಿ ಫಾರ್ಮಾ (55%) ಅಥವಾ ಬಿ ಫಾರ್ಮಾ (50%), ಫಾರ್ಮಸಿ ಕೌನ್ಸಿಲ್ ನೋಂದಣಿ
ಜೆಸಿಒ ಧಾರ್ಮಿಕ ಶಿಕ್ಷಕ: ಸಂಬಂಧಿತ ಧರ್ಮದಲ್ಲಿ ಪದವಿ/ಡಿಪ್ಲೊಮಾ.
ವಯೋಮಿತಿ:
ಅಗ್ನಿವೀರ್ ಜಿಡಿ, ತಾಂತ್ರಿಕ,
ಟ್ರೆಡ್ಸ್‌ಮನ್: 17.5 – 22 ವರ್ಷ
ಸೋಲ್ಜರ್ ಟೆಕ್ನಿಕಲ್: ಗರಿಷ್ಠ 23 ವರ್ಷ
ಸಿಪಾಯಿ ಫಾರ್ಮಾ: 19 – 25 ವರ್ಷ
ಜೆಸಿಒ ಧಾರ್ಮಿಕ ಶಿಕ್ಷಕ: 25 – 34 ವರ್ಷ
(ವಯಸ್ಸು ಜುಲೈ 1, 2027ಕ್ಕೆ ಲೆಕ್ಕಿಸಲಾಗುವುದು)
ಆಯ್ಕೆ ಪ್ರಕ್ರಿಯೆ:
ಆನ್‌ಲೈನ್ ಸಾಮಾನ್ಯ ಪ್ರವೇಶ ಪರೀಕ್ಷೆ (CEE) – ಜೂನ್ 1 ರಿಂದ 15
ದೈಹಿಕ ಸದೃಢತಾ ಪರೀಕ್ಷೆ
ದೈಹಿಕ ಅಳತೆ ಪರೀಕ್ಷೆ (ಕನಿಷ್ಠ ಎತ್ತರ: ಸಾಮಾನ್ಯ – 170 ಸೆಂ.ಮೀ, ಕ್ಲರ್ಕ್ – 162 ಸೆಂ.ಮೀ; ಎದೆ: 77 ಸೆಂ.ಮೀ + 5 ಸೆಂ.ಮೀ ವಿಸ್ತರಣೆ)
ವೈದ್ಯಕೀಯ ಪರೀಕ್ಷೆ:-
ಅಂತಿಮ ಮೆರಿಟ್ ಪಟ್ಟಿ ಪ್ರಕಟಣೆ:
ಸೂಚನೆ: ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಹತೆ ಮತ್ತು ಮಾರ್ಗಸೂಚಿಗಳನ್ನು ಪರಿಶೀಲಿಸಿ.



