ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಅವರ 49ನೇ ಹುಟ್ಟುಹಬ್ಬ ಅಭಿಮಾನಿಗಳಲ್ಲಿ ಭಾವುಕತೆಯನ್ನು ಮೂಡಿಸಿದೆ.
ಪ್ರತಿ ವರ್ಷ ಸಾವಿರಾರು ಅಭಿಮಾನಿಗಳ ಮಧ್ಯೆ ನಡೆಯುವ ಸಂಭ್ರಮ ಈ ಬಾರಿ ಜೈಲಿನ ಗೋಡೆಗಳೊಳಗೆ ಸೀಮಿತವಾಗಿದೆ. ಪುತ್ರ ವಿನೀಶ್ ಸಾಮಾಜಿಕ ಜಾಲತಾಣದಲ್ಲಿ ತಂದೆಯೊಂದಿಗೆ ಹಳೆಯ ಚಿತ್ರ ಹಂಚಿಕೊಂಡು ಪ್ರೀತಿಯ ಸಂದೇಶ ನೀಡಿದ್ದರೆ, ಪತ್ನಿ ವಿಜಯಲಕ್ಷ್ಮಿ ಕುಟುಂಬದ ಚಿತ್ರ ಪ್ರಕಟಿಸಿ ಶುಭಾಶಯ ತಿಳಿಸಿದ್ದಾರೆ.
ಹ್ಯಾಪಿ ಬರ್ತ್ಡೇ ಅಪ್ಪ, ಐ ಲವ್ ಯೂ, ನೀವು ಯಾವಾಗಲೂ ನನ್ನ ಬೆಸ್ಟ್ಫ್ರೆಂಡ್ ಎಂದು ಹಳೆಯ ಫೋಟೋ ಒಂದನ್ನು ಅಪ್ಲೋಡ್ ಮಾಡಿದ್ದಾರೆ. ಇನ್ನು ವಿಜಯಲಕ್ಷ್ಮಿ ಕೂಡಾ ಪತಿ ದರ್ಶನ್ ಹಾಗೂ ಮಗ ವಿನಿಶ್ ಜೊತೆಗಿರುವ ಫೋಟೋ ಶೇರ್ ಮಾಡಿ “ಪ್ರತಿದಿನವೂ ಸಂಭ್ರಮಿಸಲ್ಪಡುವ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯ” ಎಂದು ಬರೆದುಕೊಂಡಿದ್ದಾರೆ.ಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪ ಹಿನ್ನೆಲೆಯಲ್ಲಿ ನಟ ಹೊರಗೆ ಬರಲು ಸಾಧ್ಯವಾಗದೆ ಇರುವುದರಿಂದ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಲ್ಲದೆ ಜನ್ಮದಿನ ಆಚರಿಸಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ. ಆದರೂ ರಾಜ್ಯದ ಹಲವು ಭಾಗಗಳಲ್ಲಿ ಸೇವಾಕಾರ್ಯಗಳ ಮೂಲಕ ಅಭಿಮಾನಿಗಳು ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ.



