ಬೆಂಗಳೂರು: ರಾಜ್ಯದ ಹೆಮ್ಮೆಯ ನಂದಿನಿ ಉತ್ಪನ್ನಗಳ ಸುರಕ್ಷತೆಯನ್ನು ಹೆಚ್ಚಿಸಲು ಕೆಎಂಎಫ್ ಹೊಸ ಯೋಜನೆ ಜಾರಿಗೆ ತಂದಿದೆ.
ನಕಲಿ ಉತ್ಪನ್ನಗಳ ಹಾವಳಿಗೆ ಬ್ರೇಕ್ ಹಾಕಲು ತುಪ್ಪದ ಪ್ಯಾಕೆಟ್ ಮತ್ತು ಬಾಟಲ್‌ಗಳಲ್ಲಿ QR ಕೋಡ್ ಅಳವಡಿಸಲಾಗಿದೆ. ಗ್ರಾಹಕರು ಕೋಡ್ ಸ್ಕ್ಯಾನ್ ಮಾಡಿದರೆ, OTP ಮೂಲಕ ಉತ್ಪನ್ನದ ಸಂಪೂರ್ಣ ಮಾಹಿತಿ (ತಯಾರಿಕಾ ಸ್ಥಳ, ದಿನಾಂಕ, ಮಾರ್ಕೆಟ್ ಕೋಡ್) ತಮ್ಮ ಫೋನ್‌ನಲ್ಲಿ ಪಡೆಯಬಹುದು. ಈ ಕ್ರಮವು ನಂದಿನಿ ಬ್ರ್ಯಾಂಡ್ ಶ್ರೇಣಿಯನ್ನು ಕಾಪಾಡಲು ಹಾಗೂ ನಕಲಿ ಉತ್ಪನ್ನ ತಡೆಗೆ ಸಹಕಾರಿ ಆಗಲಿದೆ.
ಹಂತ ಹಂತವಾಗಿ ಇತರ ಉತ್ಪನ್ನಗಳ ಮೇಲೆಯೂ ಈ ವ್ಯವಸ್ಥೆಯನ್ನು ಜಾರಿಗೆ ತರಲು ಕೆಎಂಎಫ್ ಯೋಚನೆ ಮಾಡುತ್ತಿದೆ ಎನ್ನಲಾಗಿದೆ.



