ಬೆಂಗಳೂರು: ಡಿಜಿ ಮತ್ತು ಐಜಿಪಿ ಸೂಚನೆಯಂತೆ, ಸಿಲಿಕಾನ್ ಸಿಟಿಯಲ್ಲಿ ಪಾಸ್‌ಪೋರ್ಟ್ ವೆರಿಫಿಕೇಶನ್‌ಗೆ ಹೊಸ ನಿಯಮಗಳು ಜಾರಿಗೆ ಬಂದಿವೆ.
ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಈ ಮಾರ್ಗಸೂಚಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಈಗಿನಿಂದ ಪಾಸ್‌ಪೋರ್ಟ್ ಪರಿಶೀಲನೆಗೆ ಬಾಡಿ ವೋನ್ ಕ್ಯಾಮೆರಾ ಕಡ್ಡಾಯವಾಗಿದ್ದು, ಅರ್ಜಿದಾರರನ್ನು ಪೊಲೀಸ್ ಠಾಣೆಗೆ ಕರೆಸಬಾರದು. ಬದಲಾಗಿ, ಅಧಿಕಾರಿಗಳು ಅರ್ಜಿದಾರರ ವಿಳಾಸಕ್ಕೆ ಭೇಟಿ ನೀಡಿ, ನೆರೆಹೊರೆಯವರಿಂದ ಮಾಹಿತಿ ಸಂಗ್ರಹಿಸಬೇಕು.
ಅರ್ಜಿ ನೀಡುವ ಕನಿಷ್ಠ 24 ಗಂಟೆ ಮೊದಲು ಅರ್ಜಿದಾರರಿಗೆ ಎಸ್‌ಎಂಎಸ್ ಅಥವಾ ಕರೆ ಮೂಲಕ ಮಾಹಿತಿ ನೀಡಬೇಕು. ಅಧಿಕಾರಿಗಳು ಅರ್ಜಿದಾರರಿಂದ ಯಾವುದೇ ರೀತಿಯ ಲಂಚ ಅಥವಾ ಆಮಿಷ ನಿರೀಕ್ಷಿಸಬಾರದು. ಅರ್ಜಿದಾರರನ್ನು ಅಲೆದಾಡಿಸುವುದು ಅಥವಾ ವರದಿ ನೀಡಲು ವಿಳಂಬ ಮಾಡುವುದು ಮಾಡಬಾರದು. ಪ್ರತಿಕೂಲ ವರದಿ ಸಲ್ಲಿಸುವಾಗ, ಅಧಿಕಾರಿಗಳು ಸ್ಪಷ್ಟ ಮತ್ತು ಸೂಕ್ತ ಪುರಾವೆಗಳನ್ನು ಹೊಂದಿರಬೇಕು.
ನಿಯಮ ಪಾಲನೆಯ ಮೇಲೆ ವಾರಕ್ಕೆ ಒಂದು ಬಾರಿ ಡಿಸಿಪಿ ವರದಿ ಪರಿಶೀಲಿಸುತ್ತಾರೆ. ನಿಯಮ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಲಾಗಿದೆ.



