ಇಂದಿನ ವೇಗದ ಜೀವನಶೈಲಿಯಲ್ಲಿ ಮದ್ಯಪಾನವು ಒತ್ತಡ ಕಡಿಮೆ ಮಾಡಲು ಅಥವಾ ಸಂತೋಷ ಹಂಚಿಕೊಳ್ಳಲು ಹಲವರು ಮಾಡುವ ಹಬ್ಬವಾಗಿದೆ. ಆದರೆ ಮದ್ಯಪಾನದ ವೇಳೆ ಕೆಲವೊಂದು ಆಹಾರಗಳನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು.
ಆಲ್ಕೋಹಾಲ್‌ನೊಂದಿಗೆ ತಪ್ಪಿಸಬೇಕಾದ ಆಹಾರಗಳು:
- ಬ್ರೆಡ್ – ಬಿಯರ್ ಅಥವಾ ಇತರ ಮದ್ಯದೊಂದಿಗೆ ಬ್ರೆಡ್, ಸ್ಯಾಂಡ್‌ವಿಚ್, ಬರ್ಗರ್‌ಗಳು ಸೇವಿಸುವುದರಿಂದ ಯೀಸ್ಟ್ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದ ಹೊಟ್ಟೆ ಉಬ್ಬರ, ಗ್ಯಾಸ್ ಮತ್ತು ಜೀರ್ಣಾಂಗದ ಒತ್ತಡ ಹೆಚ್ಚಾಗುತ್ತದೆ. ಬದಲಿಗೆ ಬೇಯಿಸಿದ ತರಕಾರಿಗಳು ಅಥವಾ ಸಲಾಡ್ ಸೇವನೆ ಮಾಡುವುದು ಉತ್ತಮ.
- ಚಾಕೊಲೇಟ್ – ಡಾರ್ಕ್ ಚಾಕೊಲೇಟ್‌ನಲ್ಲಿ ಕೆಫೀನ್ ಮತ್ತು ಕೋಕೋ ಇರುವುದರಿಂದ, ಆಲ್ಕೋಹಾಲ್ ಜೊತೆಗೆ ಸೇವಿಸಿದರೆ ಆಸಿಡ್ ರಿಫ್ಲಕ್ಸ್, ಗ್ಯಾಸ್ ಮತ್ತು ಎದೆಯುರಿ ಸಮಸ್ಯೆ ಉಂಟಾಗಬಹುದು.
- ಕಾಳುಗಳು – ಕಡ್ಲೆ, ಬಟಾಣಿ, ಕಿಡ್ನಿ ಬೀನ್ಸ್ ಮುಂತಾದ ಕಾಳುಗಳು ಫೈಬರ್‌ನಲ್ಲಿ ಸಮೃದ್ಧವಾಗಿದ್ದು, ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತವೆ. ಆಲ್ಕೋಹಾಲ್ ಜೊತೆಗೆ ಸೇವಿಸಿದರೆ ಹೊಟ್ಟೆ ನೋವು, ಅಜೀರ್ಣಕ್ಕೆ ಕಾರಣವಾಗಬಹುದು.
- ಕರಿದ ತಿಂಡಿಗಳು – ಚಿಪ್ಸ್, ಫ್ರೆಂಚ್ ಫ್ರೈಸ್, ಡೀಪ್ ಫ್ರೈಡ್ ಆಹಾರಗಳು ಉಪ್ಪು ಮತ್ತು ಕೊಬ್ಬಿನ ಪ್ರಮಾಣ ಹೆಚ್ಚು ಹೊಂದಿರುವುದರಿಂದ ದೇಹದ ನಿರ್ಜಲೀಕರಣ ಹೆಚ್ಚಿಸುತ್ತದೆ. ಮರುದಿನ ತಲೆನೋವು, ಆಯಾಸಕ್ಕೆ ಕಾರಣವಾಗಬಹುದು.
- ಕಿತ್ತಳೆ ಹಣ್ಣು – ಸಿಟ್ರಸ್ ಹಣ್ಣುಗಳು (ಕಿತ್ತಳೆ, ನಿಂಬೆ ಇತ್ಯಾದಿ) ಹುಳಿಯಾಗಿದ್ದು ಜೀರ್ಣಕ್ರಿಯೆಗೆ ತೊಂದರೆ, ಹೊಟ್ಟೆ ಸುಡುವಿಕೆ ಉಂಟುಮಾಡಬಹುದು.
ಮದ್ಯಪಾನ ಮಾಡುವಾಗ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ತಪ್ಪಿಸಲು ಬ್ರೆಡ್, ಚಾಕೊಲೇಟ್, ಕಾಳುಗಳು, ಕರಿದ ತಿಂಡಿಗಳು, ಕಿತ್ತಳೆ ಹಣ್ಣು ಮುಂತಾದ ಆಹಾರಗಳನ್ನು ಸೇವನೆ ಮಾಡುವುದನ್ನು ತಪ್ಪಿಸಬೇಕು. ಬದಲಾಗಿ ಬೇಯಿಸಿದ ತರಕಾರಿಗಳು, ಸಲಾಡ್, ನೀರು ಹೆಚ್ಚು ಸೇವಿಸುವುದು ಉತ್ತಮ.



